ಬಿಜೆಪಿ 200ರ ಗಡಿ ದಾಟುವುದೇ ಕಷ್ಟ: ಶಶಿ ತರೂರ್ ಭವಿಷ್ಯ

02/05/2024

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದು ಅಸಾಧ್ಯ ಹಾಗೂ 200ರ ಗಡಿ ದಾಟುವುದೇ ದೊಡ್ಡ ಸವಾಲು ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ. ಪಿಟಿಐ ಸಂಪಾದಕರೊಂದಿಗಿನ ಸಂವಾದದಲ್ಲಿ ಶಶಿ ತರೂರ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಬಿಜೆಪಿಯದ್ದು ಶೂನ್ಯ ಸಂಪಾದನೆಯಾಗಲಿದೆ. ಕರ್ನಾಟಕದಲ್ಲಿ 20 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ. ಹರಿಯಾಣದಲ್ಲಿ ಈ ಬಾರಿ ಕಾಂಗ್ರೆಸ್ ಐದರಿಂದ ಏಳು ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇದೆ. ಕಳೆದ ಬಾರಿ ಬಿಜೆಪಿ ಇಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆದ್ದಿತ್ತು. ದಕ್ಷಿಣದಲ್ಲಿ ಈ ಬಾರಿ 2019 ಕ್ಕಿಂತಲೂ ಕಳಪೆ ಸಾಧನೆ ಬಿಜೆಪಿಯದ್ದಾಗಲಿದೆ. ಈವರೆಗೆ ನೂರ ತೊಂಬತ್ತು ಕ್ಷೇತ್ರಗಳಿಗೆ ಮತದಾನವಾಗಿದೆ.

ಮೂಲಗಳ ಪ್ರಕಾರ ಫಲಿತಾಂಶ ನಮಗೆ ಅನುಕೂಲಕರವಾಗಿದೆ ಅಂದ ಮಾತ್ರಕ್ಕೆ ನಮಗೆ ಅದ್ಭುತ ಜಯ ಸಿಗಲಿದೆ ಎಂದು ಹೇಳುವುದಿಲ್ಲ. ಆದರೆ ಹಾಲಿ ಸರ್ಕಾರಕ್ಕೆ ಅದು ಸುಲಭವಲ್ಲ ಎಂದವರು ಹೇಳಿದ್ದಾರೆ. 2014 ಮತ್ತು 2019 ರ ಚುನಾವಣೆಯನ್ನು ಗಮನಿಸಿದರೆ ಬಿಜೆಪಿ ಮತದಾರರಲ್ಲಿ ಈ ಬಾರಿ ಉತ್ಸಾಹ ಉಳಿದಿಲ್ಲ. ಇದನ್ನು ಗಮನಿಸಿದಾಗ ನಾವು ನಿರೀಕ್ಷೆ ಗಿಂತ ಹೆಚ್ಚಿನ ಸಾಧನೆ ಮಾಡುವುದರಲ್ಲಿ ಸಂದೇಹವಿಲ್ಲ. ಜೊತೆಗೆ ಹಿಂದಿ ಭಾಷಿಕ ಕ್ಷೇತ್ರಗಳಲ್ಲೂ ನಾವು ಪ್ರಜ್ಞಾಪೂರ್ವಕವಾಗಿ ಆಶಾವಾದಿಗಳಾಗಿದ್ದೇವೆ ಎಂದವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version