9:32 AM Wednesday 17 - December 2025

5 ಗ್ಯಾರಂಟಿಗಳನ್ನು  ಪೂರೈಸಲು  50 ಸಾವಿರ ಕೋಟಿ ವೆಚ್ಚವಾಗಲಿದೆ: ಸಿದ್ದರಾಮಯ್ಯ ಪತ್ರಿಕಾಗೋಷ್ಠಿ

siddaramaiah press meet
20/05/2023

ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನ ಒಂದೇ ವರ್ಷದಲ್ಲಿ ಈಡೇರಿಸೋಕೆ ಸಾಧ್ಯವಿಲ್ಲ. ಬದಲಾಗಿ ಹಂತ ಹಂತವಾಗಿ ಈಡೇರಿಸೋ ಮಾತನ್ನ ಇದೇ ವೇಳೆ ತಿಳಿಸಿದ ಸಿಎಂ, 5 ಗ್ಯಾರಂಟಿಗಳ ಕುರಿತಂತೆ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ 5 ಗ್ಯಾರಂಟಿಗಳ ಕುರಿತಂತೆ ಕೆಲ ತೀರ್ಮಾನಗಳನ್ನ ಈಗಾಗಲೇ ಕೈಗೊಂಡಿದ್ದು, ನುಡಿದಂತೆ ನಡೆಯುವ ಸರ್ಕಾರ ನಮ್ಮದಾಗಿದ್ದು, ಅದರ ಪ್ರಕಾರ ನಾವು ನಡೆದುಕೊಳ್ತೀವಿ ಅಂತ ಇದೇ ವೇಳೆ ತಿಳಿಸಿದರು.

50 ಸಾವಿರ ಕೋಟಿ 5 ಗ್ಯಾರಂಟಿಗಳನ್ನ ಪೂರೈಸೋದಿಕ್ಕೆ ವೆಚ್ಚವಾಗಲಿದ್ದು, ರಾಜ್ಯದ ಬಜೆಟ್ ಮೂರೂಕಾಲು ಲಕ್ಷ ಕೋಟಿ ಆಗಿದೆ ಅಂತ ಇದೇ ವೇಳೆ ತಿಳಿಸಿದ ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆಯಿತು. ಸಭೆ ಬಳಿಕ ನೂತನ ಸಿಎಂ ತಮ್ಮ 2.0 ನ ಕನಸುಗಳನ್ನ ಬಿಚ್ಚಿಟ್ಟರು. ಅದರ ಪ್ರಕಾರ ಬಡವರ ಪರವಾದ ಆಡಳಿತ ನೀಡುವುದೇ ನಮ್ಮ ಮೊದಲ ಆದ್ಯತೆ ಅಂತ ನೂತನ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಚುನಾವಣೆಗೂ ಮೊದಲು ಕಾಂಗ್ರೆಸ್ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳಾದ ಗೃಹಲಕ್ಷ್ಮೀ ಯೋಜನೆಯಡಿ ಮನೆಯೊಡತಿಗೆ ತಿಂಗಳಿಗೆ 2000 ರೂಪಾಯಿ. ಮಹಿಳೆಯರಿಗೆ ಉಚಿತ ಬಸ್ ಪಾಸ್,  ಅನ್ನಭಾಗ್ಯ – 10 ಕೆ.ಜಿ. ಅಕ್ಕಿ ಉಚಿತ,  ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ಕರೆಂಟ್,  ಯುವನಿಧಿ –- ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3000, ಸಿದ್ದರಾಮಯ್ಯ ಗ್ಯಾರಂಟಿಗಳ ಕುರಿತಂತೆ ಹೇಳಿದ್ದು,  ತೆರಿಗೆ ಸಂಗ್ರಹ ಹೆಚ್ಚಳ ಮಾಡಲು ತೀರ್ಮಾನ ಮಾಡಲಾಗಿದೆ.  ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು, ಸಾಲ ಪಡೆಯುವ ಪ್ರಮಾಣವನ್ನ ಕಡಿಮೆ ಮಾಡುವುದು,  ಬಜೆಟ್ ಗಾತ್ರವನ್ನ ಸ್ವಲ್ಪ ಹೆಚ್ಚಳ ಮಾಡುವುದಾಗಿ ಹೇಳಿದರು.

ಸಚಿವ ಸಂಪುಟ ಸಭೆಯಲ್ಲಿ 5 ಗ್ಯಾರಂಟಿಗಳ ಕುರಿತಂತೆ ಕೆಲ ತೀರ್ಮಾನಗಳನ್ನ ಈಗಾಗಲೇ ಕೈಗೊಂಡಿದ್ದು, ನುಡಿದಂತೆ ನಡೆಯುವ ಸರ್ಕಾರ ನಮ್ಮದಾಗಿದ್ದು, ಅದರ ಪ್ರಕಾರ ನಾವು ನಡೆದುಕೊಳ್ತೀವಿ ಅಂತ ಇದೇ ವೇಳೆ ತಿಳಿಸಿದ್ರು.

50 ಸಾವಿರ ಕೋಟಿ 5 ಗ್ಯಾರಂಟಿಗಳನ್ನ ಪೂರೈಸೋದಿಕ್ಕೆ ವೆಚ್ಚವಾಗಲಿದ್ದು, ರಾಜ್ಯದ ಬಜೆಟ್ ಮೂರೂಕಾಲು ಲಕ್ಷ ಕೋಟಿ ಆಗಿದೆ ಅಂತ ಇದೇ ವೇಳೆ ತಿಳಿಸಿದ ಸಿಎಂ ಸಿದ್ದರಾಮಯ್ಯ,

ಐದು ಗ್ಯಾರಂಟಿಗಳ ಜಾರಿ ಕುರಿತಂತೆ ಕ್ಯಾಬಿನೇಟ್ ಕೈಗೊಂಡ ತೀರ್ಮಾನಗಳು ಏನೆಂದರೆ,  ಗೃಹ ಜ್ಯೋತಿ – 200 ಯೂನಿಟ್ ಎಲ್ಲಾ ಮನೆಗಳಿಗೆ ಫ್ರೀ ವಿದ್ಯುತ್ ( ತಿಂಗಳಿಗೆ 1200 ಕೋಟಿ ವೆಚ್ಚ ಸಾಧ್ಯತೆ)

ಗೃಹ ಲಕ್ಷ್ಮೀ – ಪ್ರತಿ ಮನೆಯ ಒಡತಿಗೆ ತಿಂಗಳಿಗೆ 2000 ಅಕೌಂಟ್ ಗೆ ಹಾಕಲು ತೀರ್ಮಾನ

ಅನ್ನಭಾಗ್ಯ ಯೋಜನೆ – 10 ಕೆಜಿ ನೀಡಲು ತೀರ್ಮಾನ

ನಿರುದ್ಯೋಗಿ ಪದವೀಧರಿಗೆ:  ಈ ವರ್ಷ ನಿರೊದ್ಯೋಗಿಗಳಾಗಿದ್ದವರಿಗೆ 2 ವರ್ಷದ ಅವಧಿಗೆ ತಿಂಗಳಿಗೆ 3000 ರೂ ( ಮಧ್ಯದಲ್ಲಿ ಕೆಲಸ ಸಿಕ್ಕರೆ ಅನುದಾನ ಕಟ್ ಆಗಲಿದೆ) ಹಾಗೆನೇ ಡಿಪ್ಲೋಮಾ ಆಗಿ ನಿರುದ್ಯೋಗಿಗಳಾಗಿದ್ದವರಿಗೆ 1,500 ರೂ ತಿಂಗಳಿಗೆ ನೀಡಲು ತೀರ್ಮಾನ ಮಾಡಲಾಗಿದೆ.

ಸರ್ಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಮಾಡಲು ತೀರ್ಮಾನ ಮಾಡಲಾಗಿದೆ.( ಕರ್ನಾಟಕದ ಮಹಿಳೆಯರಾಗಿರಬೇಕು)

ಈ ಎಲ್ಲಾ ಗ್ಯಾರಂಟಿಗಳನ್ನ ತಕ್ಷಣದಲ್ಲೇ ಜಾರಿಗೆ ಮಾಡದಿರಲು ತೀರ್ಮಾನಿಸಿದ್ದು, ಮುಂದಿನ ಕ್ಯಾಬಿನೇಟ್ ಆದ ಬಳಿಕ ಜಾರಿಗೆ ತರಲಾಗುವುದು ಅಂತ ಸಿಎಂ ಸಿದ್ದರಾಮಯ್ಯ ತಿಳಿಸಿದ್ರು. ಇದರ ಜತೆಗೆ ರಾಜ್ಯದಲ್ಲಿರುವ ಇಂದಿರಾ ಕ್ಯಾಂಟೀನ್ ಗಳನ್ನ ಮರು ಓಪನ್ ಮಾಡಲು ಕ್ಯಾಬಿನೇಟ್ ತೀರ್ಮಾನ ಮಾಡಿದೆ ಎಂದರು.

ಸಿಎಂ, ಡಿಸಿಎಂ ಇಬ್ಬರು ಒಂದೇ ಕಾರಿನಲ್ಲಿ ವಿಧಾನಸೌಧಕ್ಕೆ ತೆರೆಳಿದರು. ಉಪ ಮುಖ್ಯಮಮತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೂ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಎಂಟು ಜನ ಶಾಸಕರು ಸಚಿವರಾಗಿಯೂ ಪದಗ್ರಹಣ ಮಾಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version