10:14 PM Saturday 23 - August 2025

12 ವರ್ಷದ ಬಾಲಕಿಯನ್ನು ವಿವಾಹವಾದ 63 ವರ್ಷದ ಆಧ್ಯಾತ್ಮಿಕ ನಾಯಕ!

nuumo borketey laweh tsuru
03/04/2024

ಘಾನಾ: 63 ವರ್ಷ ವಯಸ್ಸಿನ ಆಧ್ಯಾತ್ಮಿಕ ನಾಯಕ 12 ವರ್ಷದ ಬಾಲಕಿಯನ್ನು ಅದ್ದೂರಿಯಾಗಿ ವಿವಾಹವಾಗಿರುವ ಘಟನೆ ಘಾನಾ ದೇಶದ ರಾಜಧಾನಿ ಅಕ್ರಾ ನುಂಗುವಾ ಪ್ರದೇಶದಲ್ಲಿ ನಡೆದಿದೆ.

ಅಕ್ರಾದ ನುಂಗುವಾ ಪ್ರದೇಶದಲ್ಲಿ ಆಧ್ಯಾತ್ಮಿಕ ನಾಯಕರಾದ ನುಮೋ ಬೊರ್ಕೆಟಿ ಲಾವೆಹ್ ತ್ಸುರು XXXIII ಅವರು ಶನಿವಾರದಂದು ನಡೆದ ಬೃಹತ್ ಸಮಾರಂಭದಲ್ಲಿ ಅಪರಿಚಿತ ಮಗುವನ್ನು ವಿವಾಹವಾಗಿದ್ದಾರೆ.

“ಗ್ಬೊರ್ಬು ವುಲೋಮೊ” ಅಥವಾ ಸಾಂಪ್ರದಾಯಿಕ ಪ್ರಧಾನ ಅರ್ಚಕ ಎಂದು ಕರೆಯಲ್ಪಡುವ ಶ್ರೀ ತ್ಸುರು, ನುಂಗುವಾ ಸ್ಥಳೀಯ ಸಮುದಾಯದಲ್ಲಿ ಮಹತ್ವದ ಆಧ್ಯಾತ್ಮಿಕ ಅಧಿಕಾರವನ್ನು ಹೊಂದಿದ್ದಾರೆ.

ಘಾನಾದಲ್ಲಿ  ಮಹಿಳೆಯರ ವಿವಾಹ ವಯಸ್ಸು ಕಾನೂನು ಬದ್ಧವಾಗಿ 18 ಆಗಿದ್ದರೂ ಲಾವೆಹ್ ತ್ಸುರು 12 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ವಿವಾಹವಾಗಿದ್ದಾರೆ.

ಈ ವಿವಾಹ ಸಮಾರಂಭದಲ್ಲಿ ಹತ್ತಾರು ಸಮುದಾಯದ ಸದಸ್ಯರು ಭಾಗವಹಿಸಿದ್ದರು. ಬಾಲಕಿಗೆ ಸರಳವಾದ ಬಿಳಿ ಉಡುಗೆ ತೊಡಿಸಲಾಗಿದೆ. ಸ್ಥಳೀಯ ‘ಗ್ಯಾ’ ಭಾಷೆಯಲ್ಲಿ ಮಾತನಾಡುತ್ತಿರುವ ಮಹಿಳೆಯರು ಅಪ್ರಾಪ್ತ ಬಾಲಕಿಯನ್ನು ಪತಿಯ ಬಗ್ಗೆ ತಮಾಷೆಯ ಮಾತುಗಳನ್ನಾಡುತ್ತಾ, ವ್ಯಂಗ್ಯವಾಡುತ್ತಿದ್ದರು. ಜೊತೆಗೆ ಪತ್ನಿಯ ಕರ್ತವ್ಯಗಳಿಗೆ ಸಿದ್ಧಳಾಗುವಂತೆ ಆಕೆಗೆ ಸಲಹೆ ನೀಡುತ್ತಿದ್ದರು.

ಈ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಘಾನಿಯನ್ನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮದುವೆಯನ್ನು ರದ್ದುಪಡಿಸಬೇಕು. ಇದು ಕಾನೂನು ಬಾಹಿರ ಎಂಬ ಒತ್ತಾಯ ಕೇಳಿ ಬಂದಿದೆ.

ಈ ಟೀಕೆಗಳ ನಡುವೆಯೇ ಕೆಲವು ಸಮುದಾಯದ ಮುಖಂಡರು ಆಧ್ಯಾತ್ಮಿಕ ನಾಯಕನನ್ನು  ಸಂಪ್ರದಾಯದ ಹೆಸರಿನಲ್ಲಿ ಸಮರ್ಥಿಸಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version