ಉಡುಪಿ ಜಾಮಿಯಾ ಮಸೀದಿಯಲ್ಲಿ 77ನೇಯ ಸ್ವಾತಂತ್ರ್ಯ ದಿನಾಚರಣೆ

ಜಾಮಿಯಾ ಮಸೀದಿ ಉಡುಪಿಯಲ್ಲಿ ಇಂದು ಬೆಳಿಗ್ಗೆ 7 ಗಂಟೆಗೆ ಧ್ವಜರೋಹಣದ ಮೂಲಕ 77ನೇಯ ಸ್ವಾತಂತ್ರ್ಯಾಚರಣೆ ನಡೆಯಿತು.
ಮಸೀದಿಯ ನೂತನ ಆಡಳಿತ ಸಮಿತಿಯ ಅಧ್ಯಕ್ಷರಾದ ಜನಾಬ್. ರಿಯಾಝ್ ಅಹ್ಮದ್ರವರು ಧ್ವಜರೋಹಣ ಗೈದರು. ಉಪಾಧ್ಯಕ್ಷರಾದ ಜನಾಬ್. ವಿ. ಎಸ್. ಉಮರ್ ಸ್ವಾಗತಿಸಿದರು. ಮಸೀದಿಯ ಇಮಾಮರಾದ ಮೌಲಾನಾ ರಶೀದ್ ಅಹಮದ್ ಉಮ್ರಿ ನದ್ವಿ ಸ್ವಾತಂತ್ರ್ಯಾಚರಣೆಯ ಮಹತ್ವ ಬಗ್ಗೆ ಪ್ರಸ್ತಾವಿಕವಾಗಿ ಮಾತಾಡಿದರು. ಉಡುಪಿ ಪರಿಸರದ ಮುಸಲ್ಲಿಗಳನ್ನೊಳಗೊಂಡ ಹಿರಿಯರಾದ ಜನಾಬ್. ಕೆ. ಅಬ್ದುಲ್ ಗಫೂರ್, ಜನಾಬ್. ಕರಾಮತ್ ಅಲಿ, ಜನಾಬ್. ಹೈದರ್ ಅಲಿ, ಜನಾಬ್. ಖುರ್ಷಿದ್ ಅಹ್ಮದ್, ಜನಾಬ್. ಬಿ. ಎಮ್. ಅಬ್ಬಾಸ್, ಜನಾಬ್. ಮುಹಮ್ಮದ್ ಹುಸೇನ್, ಜನಾಬ್. ಸಯ್ಯದ್ ಯಾಸೀನ್ ಮತ್ತು ಜನಾಬ್. ಫತಾವುಲ್ಲಾಹ್ರವರನ್ನು ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.
ಮದ್ರಸಾದ ವಿದ್ಯಾರ್ಥಿಗಳು ರಾಷ್ಟ್ರ ಗೀತೆಯನ್ನು ಹಾಡಿದರು.ಮಸೀದಿಯ ಕಾರ್ಯದರ್ಶಿಯವರಾದ ಜನಾಬ್. ಖಾಲಿದ್ ಅಬ್ದುಲ್ ಅಝೀಝ್ ಧನ್ಯವಾದವನ್ನಿತ್ತರು & ಬಿ.ಎನ್. ಶಾಹಿದ್ ಅಲಿ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿ ಸುಮಾರು 200 ಮಂದಿ ಮುಸಲ್ಲಿಗಳು ಉಪಸ್ಥಿತರಿದ್ದರು.