ಮುಸ್ಲಿಂ ಸಮುದಾಯದ ವ್ಯಾಪಾರಿಗಳು ಸ್ಥಳ ಬಿಟ್ಟು ತೆರಳಿ: ಹಿಂದೂತ್ವ ಸಂಘಟನೆಗಳಿಂದ ಬೆದರಿಕೆ

ಉತ್ತರಾಖಂಡದ ಮುಸ್ಲಿಂ ಸಮುದಾಯದ ವ್ಯಾಪಾರಿಗಳು ಸ್ಥಳ ಬಿಟ್ಟು ತೆರಳಬೇಕು ಎಂದು ಹಿಂದೂತ್ವ ಸಂಘಟನೆಗಳು ಆಗ್ರಹಿಸಿವೆ. ಉತ್ತರಕಾಶಿ ಜಿಲ್ಲೆಯ ಪುರೋಲ ನಗರದ ಮುಸ್ಲಿಂ ವ್ಯಾಪಾರಿಗಳೊಂದಿಗೆ ಸ್ಥಳ ಬಿಟ್ಟು ತೆರಳುವಂತೆ ಎಚ್ಚರಿಕೆ ನೀಡಲಾಗಿದೆ.
ಈ ಪ್ರದೇಶದ ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳಿಗೆ ದಾಳಿ ನಡೆಸುವುದು ಸಾಮಾನ್ಯವಾಗಿತ್ತು. ಪಿತ್ತೋಗಡ್ ಜಿಲ್ಲೆಯ ಗಾರ್ಚುಲ ಪಟ್ಟಣವನ್ನು ಬಿಟ್ಟು ಹೋಗಬೇಕು ಎಂದು 86 ಮುಸ್ಲಿಂ ವ್ಯಾಪಾರಿಗಳಿಗೆ ಪ್ರದೇಶದ ವ್ಯಾಪಾರಿಗಳ ಸಂಘಟನೆ ನಿರ್ದೇಶನ ನೀಡಿದೆ.
ಬಹುಸಂಖ್ಯಾತ ಸಮುದಾಯದ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಅಪಹರಿಸಿಕೊಂಡು ಹೋಗಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆಯ ಬಳಿಕ ಮುಸ್ಲಿಂ ವ್ಯಾಪಾರಿಗಳಿಗೆ ಈ ಎಚ್ಚರಿಕೆಯನ್ನು ನೀಡಲಾಗಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ ಕೂಡ ಇಂಥದ್ದೇ ಘಟನೆ ನಡೆದಿತ್ತು.
ಆಗ ಓರ್ವ ಮುಸ್ಲಿಂ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಆಗ ಇಸ್ಲಾಂ ವಿರೋಧಿ ಘೋಷಣೆಗಳೊಂದಿಗೆ ವ್ಯಾಪಾರಿ ಸಂಘಟನೆಗಳು ಮೆರವಣಿಗೆ ನಡೆಸಿದ್ದುವು. ಈ ವ್ಯಾಪಾರಿ ಸಂಘಟನೆಗಳ ಮುಖ್ಯಸ್ಥರು ಸಂಘ ಪರಿವಾರದವರೇ ಆಗಿದ್ದಾರೆ ಎಂಬುದು ಗಮನಾರ್ಹ
ಇದೇ ವೇಳೆ ದಾರ್ಚುಲ ನಗರದಲ್ಲಿ 91 ಮುಸ್ಲಿಂ ವ್ಯಾಪಾರಿಗಳ ಅಂಗಡಿ ರಿಜಿಸ್ಟ್ರೇಷನ್ ಅನ್ನು ವ್ಯಾಪಾರಿ ಸಂಘಟನೆ ರದ್ದುಗೊಳಿಸಿದೆ. ಸ್ಥಳೀಯ ಆಡಳಿತದೊಂದಿಗೆ ಚರ್ಚಿಸಿ ಈ ಕ್ರಮ ಕೈಗೊಂಡಿರುವುದಾಗಿ ಅದು ಹೇಳಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth