2:37 PM Saturday 25 - October 2025

ಶಿವಮೊಗ್ಗದ  19 ವರ್ಷದ ಯುವತಿಗೆ ಮಂಗನ ಜ್ವರ!

monkey fever
08/01/2024

ಶಿವಮೊಗ್ಗ: 19 ವರ್ಷದ ಯುವತಿಯೊಬ್ಬಳಿಗೆ ಮಂಗನ ಜ್ವರ ಎಂದು ಕರೆಯಲ್ಪಡುವ ಕ್ಯಾಸನೂರು ಅರಣ್ಯ ಕಾಯಿಲೆ(KFD) ಪಾಸಿಟಿವ್  ಆಗಿದ್ದು, ಯುವತಿಯ ಸ್ಥಿತಿ ಗಂಭೀರವಾಗಿದೆ.

ಹೊಸನಗರ ತಾಲೂಕಿನ ಸಂಪೆಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಗ್ರಾಮವೊಂದರಲ್ಲಿ ಕೆಎಫ್‌ ಡಿ ಎರಡನೇ ಪ್ರಕರಣ ವರದಿಯಾಗಿದೆ.

19 ವರ್ಷದ ಯುವತಿಗೆ ಕೆಎಫ್ ಡಿ ಪಾಟಿಸಿವ್ ಬಂದಿದ್ದು ಪ್ರಸ್ತುತ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿದ್ದಾಳೆ  ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.

ಜನವರಿ 1ರಂದು ಮೆಕ್‌ ಗನ್ ಆಸ್ಪತ್ರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ  ಯುವತಿಯನ್ನು ದಾಖಲಿಸಲಾಗಿತ್ತು. ಆಕೆಗೆ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇತ್ತು. ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರಂಭದಲ್ಲಿ ಯುವತಿಗೆ ಕೆಡಿಎಫ್ ನೆಗೆಟಿವ್ ಬಂದಿತ್ತು. ಆದರೆ ಮೂರ್ನಾಲ್ಕು ದಿನಗಳ ನಂತರ ಆಕೆಗೆ ಕೆಎಫ್‌ ಡಿ ಪಾಸಿಟಿವ್ ರಿಸಲ್ಟ್  ಬಂದಿದೆ ಎಂದು ಡಿಎಚ್‌ ಒ ಹೇಳಿದರು.

ಸದ್ಯ ಯುವತಿಯ ಆರೋಗ್ಯದ ದೃಷ್ಟಿಯಿಂದ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಆಕೆಯನ್ನು ರವಾನಿಸಲಾಗಿದೆ. ಭಾನುವಾರ ಯುವತಿಗೆ ಪ್ರಜ್ಞೆ ಬಂದಿದೆ. ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version