ದೇವಸ್ಥಾನದ ರಥದ ಚಕ್ರದಡಿ ಸಿಲುಕಿ 5 ವರ್ಷದ ಬಾಲಕಿಯ ದಾರುಣ ಅಂತ್ಯ
ಕೊಲ್ಲಂ: ದೇವಾಲಯದ ರಥದ ಅಡಿಗೆ ಸಿಲುಕಿ ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೇರಳದ ಕೊಲ್ಲಂ ಕೊಟ್ಟನ್ ಕುಳಂಗರ ದೇವಸ್ಥಾನದಲ್ಲಿ ನಡೆದಿದೆ.
ದೇವಸ್ಥಾನದಲ್ಲಿ ಚಮಯವಿಳಕ್ಕುಂ ಉತ್ಸವದ ವೇಳೆ ಭಕ್ತರು ರಥ ಎಳೆಯುತ್ತಿದ್ದ ವೇಳೆ ಐದು ವರ್ಷದ ಬಾಲಕಿ ಕ್ಷೇತ್ರ ರಥದ ದೊಡ್ಡ ಚಕ್ರಗಳಡಿಗೆ ಸಿಲುಕಿದ್ದು, ದಾರುಣವಾಗಿ ಸಾವನ್ನಪ್ಪಿದ್ದಾಳೆ.
ಕ್ಷೇತ್ರ, ಚವರ ನಿವಾಸಿ ದಂಪತಿಯ ಪುತ್ರಿಯಾಗಿದ್ದು, ತನ್ನ ಪೋಷಕರ ಜೊತೆಗೆ ದೇವಸ್ಥಾನಕ್ಕೆ ಬಂದಿದ್ದಳು. ಘಟನೆ ನಡೆದ ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಬಾಲಕಿ, ಅದಾಗಲೇ ಮೃತಪಟ್ಟಿದ್ದಳು.
ಮಾರ್ಚ್ 24ರಂದು ರಾತ್ರಿ 11:30ರ ವೇಳೆಗೆ ಈ ಘಟನೆ ನಡೆದಿದೆ. ಮೃತರ ಕುಟುಂಬಸ್ಥರ ಸಂಬಂಧಿಕರ ರೋದನೆ ಮುಗಿಲು ಮುಟ್ಟಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

























