ಆಟವಾಡುತ್ತಿದ್ದ ಮಗು ಸಂಪ್ ಗೆ ಬಿದ್ದು ದಾರುಣ ಸಾವು!

ಬೆಳಗಾವಿ: ಆಟವಾಡುತ್ತಿದ್ದ 2 ವರ್ಷದ ಮಗುವೊಂದು ಸಂಪ್ ಗೆ ಬಿದ್ದು ದಾರುಣವಾಗಿ ಅಂತ್ಯಕಂಡ ಘಟನೆ ಖಡೇ ಬಜಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಗ್ರಾಳ ಗಲ್ಲಿಯಲ್ಲಿ ನಡೆದಿದೆ.
ಸಾಯೀಶಾ ಸಂದೀಪ್ ಬಡವನಾಚೆ(2) ಮೃತಪಟ್ಟ ಮಗುವಾಗಿದೆ. ಆಟವಾಡುತ್ತಿದ್ದ ಮಗು ಏಕಾಏಕಿ ಕಣ್ಮರೆಯಾಗಿ6ತ್ತು. ಮಗುವಿಗಾಗಿ ಪೋಷಕರು ಎಷ್ಟೇ ಹುಡುಕಾಟ ನಡೆಸಿದ್ದರೂ ಮಗು ಪತ್ತೆಯಾಗಿರಲಿಲ್ಲ, ಅನುಮಾನಗೊಂಡು ಸಂಪ್ ತೆರೆದಾಗ ಮಗು ಪತ್ತೆಯಾಗಿದೆ.
ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮಗುವನ್ನು ಕಳೆದುಕೊಂಡು ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ.
ಮಕ್ಕಳು ಇದ್ದ ಮನೆಗಳಲ್ಲಿ ಪೋಷಕರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮನೆಯ ಸಮೀಪ ತೆರೆದ ಸಂಪ್ ಗಳು ಇದ್ದಲ್ಲಿ ಅವುಗಳ ನಿರ್ವಹಣೆ ಬಹಳ ಮುಖ್ಯ, ಒಂದು ಕ್ಷಣದ ನಿರ್ಲಕ್ಷ್ಯಗಳು ಕೂಡ ಮಕ್ಕಳ ಪ್ರಾಣಕ್ಕೆ ಅಪಾಯವನ್ನುಂಟು ಮಾಡಬಹುದು. ಇಂತಹ ಸಾಕಷ್ಟು ಘಟನೆಗಳು ಮರುಕಳಿಸುತ್ತಲೇ ಇವೆ. ಹೀಗಾಗಿ ಪೋಷಕರು ಇತ್ತ ಗಮನ ಹರಿಸಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97
ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068