ತಂಗಿಯ ಸಾವಿನಿಂದ ನೊಂದು ವೈದ್ಯ ಸಾವಿಗೆ ಶರಣು!
ಮಂಡ್ಯ: ತಂಗಿಯ ಸಾವಿನಿಂದ ನೊಂದ ಅಣ್ಣನೋರ್ವ ನೇಣುಬಿಗಿದುಕೊಂಡು ಸಾವಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರುತಾಲೂಕಿನ ಕುದುರುಗುಂಡಿ ಗ್ರಾಮದಲ್ಲಿ ನಡೆದಿದೆ.
ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ.ವೇಣುಗೋಪಾಲ್(58) ಸಾವಿಗೆ ಶರಣಾದವರಾಗಿದ್ದು, ಇವರ ತಂಗಿ 1 ವರ್ಷಗಳ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. 3 ದಿನದ ಹಿಂದೆ ಗಾಯತ್ರಿಯ ಮೊದಲ ವರ್ಷದ ತಿಥಿ ಕಾರ್ಯ ಕೂಡ ಮಾಡಿದ್ದರು. ತಿಥಿ ಕಾರ್ಯದ ದಿನ ತಂಗಿಯ ಸಮಾಧಿ ಪಕ್ಕ ಕುಳಿತು ಅಣ್ಣ ಡಾ.ವೇಣುಗೋಪಾಲ್ ಅಳುತ್ತಿದ್ದರು ಎನ್ನಲಾಗಿದೆ.
ಜೂನ್ 1ರಂದು ಸಂಜೆ ಕುದುರುಗುಂಡಿಯ ತಂಗಿ ಮನೆಗೆ ಹೋಗಿದ್ದ ವೇಣುಗೋಪಾಲ್ ನಂತರ ಮೈಸೂರಿಗೆ ತೆರಳುವುದಾಗಿ ಹೇಳಿ ಗದ್ದೆಗೆ ತೆರಳಿ ಸಾವಿಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























