7:31 AM Thursday 22 - January 2026

ಆ ಹುಡುಗಿ ಅಷ್ಟೊತ್ತಿಗೆ ಅಲ್ಲಿಗೆ ಏಕೆ ಹೋಗಿದ್ದಳೋ? | ಗ್ಯಾಂಗ್ ರೇಪ್  ಬಗ್ಗೆ ಮಂಜುಳಾ ಮಾನಸ ಉಡಾಫೆ ಮಾತುಗಳು

manjula manasa
27/08/2021

ಬೆಂಗಳೂರು: “ಆ ಹುಡುಗಿ ಅಷ್ಟೊತ್ತಿಗೆ ಅಲ್ಲಿಗೆ ಏಕೆ ಹೋಗಿದ್ದಳೋ,  ಆ ಸಂದರ್ಭದಲ್ಲಿ ಆ ಹೆಣ್ಮಗಳಿಗೂ… ನನಗೆ ಅಸಹ್ಯ ಅನಿಸುತ್ತದೆ. ಎಂಬಿಎ ಸ್ಟೂಡೆಂಟ್ ಆಗಿದ್ದುಕೊಂಡು ಅಷ್ಟೊತ್ತಲ್ಲಿ ಯಾಕೆ ಬಂದಿದ್ಳು ಅಂತ ನನಗೆ ಗೊತ್ತಿಲ್ಲ. ತಪ್ಪು ಕೂಡ” ಹೀಗಂದವರು ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ, ಕಾಂಗ್ರೆಸ್ ನಾಯಕಿ ಮಂಜುಳಾ ಮಾನಸ.

ಮೈಸೂರಿನಲ್ಲಿ ನಡೆದಿರುವ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತ ಯುವತಿಯನ್ನೇ ತಪ್ಪಲ್ಲಿಟ್ಟು ಮಾತನಾಡುವಂತಹ ದುಃಸ್ಥಿತಿ ಸದ್ಯ ರಾಜ್ಯದಲ್ಲಿ ಕಂಡು ಬರುತ್ತಿದೆ. ಗೃಹ ಸಚಿವರು ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಕಾಂಗ್ರೆಸ್ ನವರು ಖಂಡಿಸಿದ್ದರು. ಆದರೆ ಇದೀಗ ಕಾಂಗ್ರೆಸ್ ನಾಯಕಿ ಮಂಜುಳ ಮಾನಸ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ನಿನ್ನೆ ಆಗಿರುವ ಘಟನೆಗೆ ಸಂಬಂಧಪಟ್ಟಂತೆ ಬೆಳಗ್ಗೆ ಕಂಪ್ಲೇಂಟ್ ಆದರೂ ಈಗಾಗಲೇ ಮೂರು ಗಂಟೆ ಆಗಿದೆ. ಈಗ ಸ್ಪಾಟ್ ಗೆ ಪೊಲೀಸ್ ನವರು ಬಂದಿದ್ದಾರೆ ಅಂದರೆ ಗೊತ್ತಿಲ್ಲ ಅದರ ಹಿನ್ನಲೆ ಏನು ಅಂತ ಎಂದು ಅವರು ಸಂತ್ರಸ್ತೆಯನ್ನೇ ತಪ್ಪಿನಲ್ಲಿಟ್ಟು ಮಾತನಾಡಿರುವುದು ವರದಿಯಾಗಿದೆ.

ಇನ್ನಷ್ಟು ಸುದ್ದಿಗಳು…

ಕಾಬುಲ್ ವಿಮಾನ ನಿಲ್ದಾಣದಲ್ಲಿ ಭಾರೀ ಸ್ಫೋಟ | ಸಾಕಷ್ಟು ಜನರು ಅಪಾಯಕ್ಕೆ ಸಿಲುಕಿರುವ ಶಂಕೆ

ಕಾನೂನು ಸುವ್ಯವಸ್ಥೆ ಹತೋಟಿಗೆ ಬರಲಿ ಎಂದು ಚಾಮುಂಡಿಯನ್ನು ಬೇಡಿದ್ದೇನೆ ಎಂದ ಗೃಹ ಸಚಿವ ಅರಗ ಜ್ಞಾನೇಂದ್ರ!

ಸುದ್ದಿ ಪ್ರಸಾರ ಮಾಡುವುದಾಗಿ ಬ್ಲ್ಯಾಕ್ ಮೇಲ್ | ವರದಿಗಾರ ಸೇರಿದಂತೆ 6 ಮಂದಿ ಅರೆಸ್ಟ್

ಪರಿಶಿಷ್ಟ ಜಾತಿಯ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ | ಆರೋಪಿ ಪಿಎಸ್ ಐ ಅರ್ಜುನ್ ಜಾಮೀನು ಅರ್ಜಿ ವಜಾ

ಗೃಹ ಸಚಿವರನ್ನು ರೇಪ್ ಮಾಡಿದ ಕಾಂಗ್ರೆಸ್ ನಾಯಕರ ಮೇಲೆ ಕೇಸ್ ಮಾಡಿ | ಡಿ.ಕೆ.ಶಿವಕುಮಾರ್ ಲೇವಡಿ

ಕಾರನ್ನು ನೀರಿಗೆ ಹಾರಿಸಿ ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆಗೆ ಯತ್ನ | ಇಬ್ಬರು ನೀರುಪಾಲು

ನಿನ್ನ ಕಾಲ್ಗುಣ ಸರಿಯಿಲ್ಲ, ನೀನು ದರಿದ್ರ… ಪತಿಯ ನಿಂದನೆಯಿಂದ ಬೇಸತ್ತು ಪತ್ನಿ ಆತ್ಮಹತ್ಯೆ | ಡೆತ್ ನೋಟ್ ನಲ್ಲಿ ಭಾವನಾತ್ಮಕ ಸಂದೇಶ

ಇತ್ತೀಚಿನ ಸುದ್ದಿ

Exit mobile version