ಜೈಭೀಮ್ ಯುವ ಸೇನೆ ನೆತ್ತೋಡಿ ಲೋಕಲ್ಕೆ ವತಿಯಿಂದ ಅದ್ದೂರಿಯ ಅಂಬೇಡ್ಕರ್ ಜಯಂತಿ

ಮೂಡುಬಿದಿರೆ : ಜೈಭೀಮ್ ಯುವ ಸೇನೆ ನೆತ್ತೋಡಿ ಲೋಕಲ್ಕೆ ಇದರ ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ನೆತ್ತೋಡಿ ಲೋಕಲ್ಕೆಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೂ ಮೊದಲು ಅಂಬೇಡ್ಕರ್ ಭಾವಚಿತ್ರ ದೊಂದಿಗೆ ಗಂಟಲ್ ಕಟ್ಟೆ ಬದ್ರಿಯಾ ಜುಮ್ಮಾ ಮಸೀದಿ ಬಳಿಯಿಂದ ನೆತ್ತೋಡಿ ಲೋಕಲ್ಕೆ ವರೆಗೆ ಮೆರವಣಿಗೆ ನಡೆಸಲಾಯಿತು.
ದಾರಿಯುದ್ಧಕ್ಕೂ ಅಂಬೇಡ್ಕರ್ ಘೋಷನೆ, ಜೈಕಾರಗಳನ್ನು ಕೂಗುತ್ತ ಜಾಥಾ ಸಾಗಿತ್ತು. ಬಳಿಕ ಲೋಕಲ್ಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಸಾಯುವ ತನಕವೂ ಹೋರಾಟ ಮಾಡಬೇಕಾಗುತ್ತದೆ:
ಮುಖ್ಯ ಭಾಷಣಕಾರ ಜಯಕುಮಾರ್ ಹಾದಿಗೆ ಮಾತಾನಾಡಿ, ನಾವ್ಯಾರು ಕೂಡ ಅಂಬೇಡ್ಕರ್ ಅವರ ಆಳಕ್ಕೆ ಇಳಿದು ಅಧ್ಯಯನ ಮಾಡುತ್ತಿಲ್ಲ, ಬಾಬಾ ಸಾಹೇಬರು ಬಹಳ ಸ್ಪಷ್ಟವಾಗಿ ಹೇಳುತ್ತಾರೆ, ‘ನೀವು ಶಿಕ್ಷಣ ಪಡೆಯಿರಿ, ಸಂಘಟನೆ ಮಾಡಿ ನಿಮಗೆ ಬೇಕಾದ ಹಕ್ಕು ಅಧಿಕಾರಿಗಳನ್ನು ಪಡೆದುಕೊಳ್ಳಿ’ ಎಂದು ತಿಳಿಸಿದರು.
ಈ ದೇಶದಲ್ಲಿ ಸುಮಾರು 5,700 ಜಾತಿಗಳಿವೆ, ಯಾವುದೇ ಜಾತಿ ಕೂಡ ಬೀದಿಗಿಳಿದು ಹೋರಾಟ ಮಾಡುತ್ತಿಲ್ಲ, ಆದರೆ ಇಂದಿಗೂ ನಾವು ನಮಗೆ ಅನ್ಯಾಯವಾಗಿದೆ ಎಂದು ಹೋರಾಟ ಮಾಡುತ್ತಲೇ ಇದ್ದೇವೆ. ನಾವು ಸಂಘಟಿತರಾಗದೇ ಇದ್ದರೆ, ಸಾಯುವ ತನಕವೂ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕಾರ್ಯಕ್ರಮ ವನ್ನು ಹರಿಯಪ್ಪ ಮುತ್ತೂರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಭಾಸ್ಕರ್ ಎನ್. ಎಸ್. ವಹಿಸಿದ್ದರು. ಇದೇ ವೇಳೆ ಕೃಷಿಯಲ್ಲಿ ಸಾಧನೆ ಮಾಡಿರುವ ಮೆನ್ಪ ಲೋಕಲ್ಕೆ ಹಾಗೂ ಬಾಬು ಲೋಕಲ್ಕೆ ಅವರನ್ನು ಸನ್ಮಾನಿಸಲಾಯಿತು.
ಮುಸ್ಲಿಮ್ -–ಕ್ರೈಸ್ತರು ಭಾಗಿ:
ಮೆರವಣಿಗೆಯಲ್ಲಿ ದಲಿತರೊಂದಿಗೆ ನೀಲಿ ಶಾಲು ಮತ್ತು ನೀಲಿ ಬಾವುಟ ಹಿಡಿದು ಬದ್ರಿಯಾ ಜುಮ್ಮಾ ಮಸೀದಿ ಗಂಟಲ್ ಕಟ್ಟೆಯ ಅಧ್ಯಕ್ಷ ಇಬ್ರಾಹಿಂ ಹಾಗೂ ಸದಸ್ಯರು ಮತ್ತು ಅಭಿಮಾನ್ ಬಸ್ ಮಾಲಕರಾದ ಅಬ್ದುಲ್ ರಝಕ್, ಕ್ರಿಶ್ಚಿಯನ್ ಸಮುದಾಯದವರು ಪಾಲ್ಗೊಂಡಿದ್ದು, ಇದೊಂದು ಸೌಹಾರ್ದತೆಗೆ ಸಾಕ್ಷಿಯಾಗಿತ್ತು.
ಈ ಸಂದರ್ಭದಲ್ಲಿ ಮಂಗಳೂರು ತಾಲೂಕು ಪಂಚಾಯತ್ ನ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಗ್ರಾಮ ಪಂಚಾಯತ್ ಸದಸ್ಯೆ ರಜನಿ, ಉಜಿರೆ ಪ್ರಸನ್ನ ಕಾಲೇಜಿನ ಉಪ ಪ್ರಾoಶುಪಾಲರಾದ ಶ್ರೀನಿವಾಸ, ಸಂವಿಧಾನ ರಕ್ಷಣಾ ಸಮಿತಿ ಕುಕ್ಕೇಡಿಯ ಅಧ್ಯಕ್ಷ ಸುಂದರ, ಅಧ್ಯಾಪಕರಾದ ಲೋಕಯ್ಯ, ಹೊಸಂಗಡಿ ಪಂಚಾಯತ್ ನ ಮಾಜಿ ಅಧ್ಯಕ್ಷ ಸುಂದರ್ ಪೆರಿಂಜೆ, ಕರ್ನಾಟಕ ಭೀಮ್ ಆರ್ಮಿಯ ಜಿಲ್ಲಾಧ್ಯಕ್ಷ ವಿವೇಕಾನಂದ ಶಿರ್ತಾಡಿ, ಶ್ರೀ ದುರ್ಗಾಪರಮೇಶ್ವರಿ ಕಾಲೇಜು ಕಟೀಲು ನಿವೃತ ಪ್ರಾoಶುಪಾಲರಾದ ಸೋಮಪ್ಪ ಅಲಂಗಾರು, ಬದ್ರಿಯಾ ಜುಮ್ಮಾ ಮಸೀದಿ ಗಂಟಲ್ ಕಟ್ಟೆಯ ಅಧ್ಯಕ್ಷ ಇಬ್ರಾಹಿಂ, ಅಭಿಮಾನ್ ಬಸ್ ಮಾಲಕರಾದ ಅಬ್ದುಲ್ ರಝಕ್, ಶ್ರೀಕ್ಷೇತ್ರ ಅಲೇರಿ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಪಾಲ್ಯ, ಬಹುಜನ ಚಿಂತಕರು ರವೀಂದ್ರ ನೆತ್ತೋಡಿ, ಮಹಾನಾಯಕ ಮಾಧ್ಯಮದ ಹಿರಿಯ ಪತ್ರಕರ್ತ ರಾಜೇಶ್ ನೆತ್ತೋಡಿ, ದಲಿತ ಮುಖಂಡರಾದ ವಾಸು ಶಿರ್ತಾಡಿ, ನಿತಿನ್ ಮುತ್ತೂರು, ಪ್ರವೀಣ್ ಸೂರ್ಯ, ರಾಜು ಉರ್ಪೆಲ್ ಪಾದೆ, ಗಣೇಶ್ ಕೆ. ಎಸ್., ಸತೀಶ್ ಕೊಣಾಜೆ, ಉಜಿನೆ, ಬಹುಜನ ಚಿಂತಕರಾದ ವಸಂತ ಕಕ್ಯಪದವು, ರಮೇಶ್ ಎನ್ಮೇಜ್ ಹಾಗೂ ಯುವ ಮುಖಂಡರಾದ ಶಿವಕುಮಾರ್ ಬಾಳೆಹೊನ್ನೂರು, ಪದ್ಮನಾಭ ಗುತ್ತುಬಳಿ, ಸಂದೀಪ್ ಲೋಕಲ್ಕೆ, ಸುದೀಪ್ ಲೋಕಲ್ಕೆ, ಪವನ್ ಲೋಕಲ್ಕೆ, ಪದ್ಮಿನಿ ಲೋಕಲ್ಕೆ, ಜಾನಮ್ಮ, ಪುಷ್ಪಾ, ಮೂಡುಬಿದಿರೆ ಪುರಸಭಾ ಮಾಜಿ ಅಧ್ಯಕ್ಷೆ ದೇವಕಿ, ಪ್ರಮೀಳಾ ಭಾಸ್ಕರ್, ರಾಜು ಲೋಕಲ್ಕೆ, ಕವಿತಾ ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth