ಲೇಡಿಸ್ ಪಿಜಿಗೆ ನುಗ್ಗಿದ ಕಾಮಾಂಧ: ಯುವತಿಗೆ ಲೈಂಗಿಕ ಕಿರುಕುಳ

rape
31/08/2025

ಬೆಂಗಳೂರು: ಲೇಡಿಸ್ ಪಿಜಿಗೆ ನುಗ್ಗಿದ ಕಾಮುಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಸುದ್ದಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಗಸ್ಟ್ 29, ಶುಕ್ರವಾರ ಮುಂಜಾನೆ 3 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.  ಘಟನೆ ಸಂಬಂಧ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಸಿ ಕ್ಯಾಮರಾದಲ್ಲಿ ಕಾಮಾಂಧನ ಚಲನವಲನ ಸೆರೆಯಾಗಿದೆ.

ಮುಂಜಾನೆ ಮೂರು ಗಂಟೆಗೆ ಮಾಸ್ಕ್ ಧರಿಸಿದ್ದ ಆರೋಪಿಯು ಪಿಜಿಗೆ ಬಂದು ಯುವತಿ ಇದ್ದ ರೂಮಿನೊಳಗೆ ನುಗ್ಗಿದ್ದಾನೆ.  ಯುವತಿ ತನ್ನ ರೂಮ್ ಮೇಟ್ ಬಂದಿರಬಹುದು ಎಂದು ಭಾವಿಸಿದ್ದಳು. ಈ ವೇಳೆ ಆರೋಪಿಯು ರೂಮ್ ನ ಎಲ್ಲ ಬಾಗಿಲು ಮುಚ್ಚಿ ಡೋರ್ ಲಾಕ್ ಮಾಡಿದ್ದು, ಲೈಂಗಿಕ ಕಿರುಕುಳ ನೀಡಿದ್ದಾನೆ.

ಯುವತಿ ತಕ್ಷಣ ಎಚ್ಚೆತ್ತುಕೊಂಡು ಪ್ರತಿರೋಧ ತೋರಿದ ವೇಳೆ ಮತ್ತಷ್ಟು ಕಿರುಕುಳ ನೀಡಿದ್ದಲ್ಲದೇ, ಕಪ್ ​ಬೋರ್ಡ್​ನಲ್ಲಿದ್ದ 2,500 ರೂ ಹಣ ಎತ್ತಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ಘಟನೆ ಸಂಬಂಧ  ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ. ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.  ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version