4:46 PM Wednesday 17 - September 2025

ಮನೆಗೆ ನುಗ್ಗಿದ ಬೀದಿನಾಯಿಯನ್ನು ಹೊರಹಾಕಲು 100ಕ್ಕೆ ಡಯಲ್ ಮಾಡಿದ ವ್ಯಕ್ತಿ!

dog
29/05/2024

ಮನೆಯೊಳಗೆ ಬೀದಿನಾಯಿ ನುಗ್ಗಿದ್ದಕ್ಕೆ ವ್ಯಕ್ತಿಯೋರ್ವ ತುರ್ತು ಸಹಾಯವಾಣಿ 100ಕ್ಕೆ ಡಯಲ್ ಮಾಡಿದ ಘಟನೆ ನಡೆದಿದ್ದು, ತಾವು ಅಪಾಯದಲ್ಲಿದ್ದು, ರಕ್ಷಿಸುವಂತೆ  ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಬಂದ ವೇಳೆ ಮನೆಯೊಳಗೆ ಬೀದಿನಾಯಿ ಕುಳಿತಿರುವುದು ಕಂಡು ಬಂದಿದೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.  ತೆಲುಗು ಭಾಷೆಯಲ್ಲಿ ವಿಡಿಯೋದಲ್ಲಿ ಪೊಲೀಸರು ಹಾಗೂ ಮನೆಯ ವ್ಯಕ್ತಿ ಸಂಭಾಷಣೆ ನಡೆಸುತ್ತಿದ್ದು, ತುರ್ತು ಸಹಾಯವಾಣಿಯನ್ನು ದುರ್ಬಳಕೆ ಮಾಡಿಕೊಂಡಿರುವುದರ ವಿರುದ್ಧ ಪೊಲೀಸರು ವ್ಯಕ್ತಿಯನ್ನು ತರಾಟೆಗೆತ್ತಿಕೊಳ್ಳುತ್ತಿರುವುದು ಕಂಡು ಬಂದಿದೆ.

ಬೀದಿ ನಾಯಿ ಮನೆಯೊಳಗೆ ನುಗ್ಗಿದೆ, ಅದು ನಮ್ಮನ್ನು ಕಚ್ಚಬಹುದು ಎಂಬ ಭಯದಿಂದ ಪೊಲೀಸರಿಗೆ ಕರೆ ಮಾಡಿರುವುದಾಗಿ ವ್ಯಕ್ತಿ ಪೊಲೀಸರ ಜೊತೆಗೆ ವಾದಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂತು.

ಇನ್ನೂ ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿಯ ಪರವಾಗಿ ಕೆಲವರು ಕಾಮೆಂಟ್ ಮಾಡಿದ್ದು, ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ನೇರವಾಗಿ ಮನೆಗೆ ನುಗ್ಗುತ್ತಿದೆ. ಜನ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ಪೊಲೀಸರಿಗೆ ಕರೆ ಮಾಡಿ ಆತ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾನೆ. ಬೀದಿ ನಾಯಿಗಳನ್ನು ಹೊಡೆದು ಓಡಿಸಿದರೆ, ಪ್ರಾಣಿ ದಯೆ ಹೆಸರಿನಲ್ಲಿ ಕೇಸ್ ಹಾಕಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಆ ವ್ಯಕ್ತಿ ಪೊಲೀಸರಿಗೆ ಕರೆ ಮಾಡಿರಬಹುದು ಎಂದು ವಾದಿಸಿದ್ದಾರೆ.

ಹಾಗೆಯೇ ಕೆಲವರು, ತುರ್ತು ಸಹಾಯವಾಣಿಯನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳಬಾರದು, ತುರ್ತು ಸಂದರ್ಭದಲ್ಲಿ ಈ ಸಹಾಯವಾಣಿ ಅಪಾಯದಲ್ಲಿದ್ದವರಿಗೆ ಅನುಕೂಲಕರವಾಗಿದೆ.  ಪೊಲೀಸರ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವುದು ಸರಿಯಲ್ಲ, ಇದರಿಂದಾಗಿ ನಿಜವಾಗಿಯೂ ಅಪಾಯದಲ್ಲಿರುವವರಿಗೆ ತೊಂದರೆಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ

Exit mobile version