ಬರದ ನಡುವೆ ಸಚಿವರಿಗೆ ಹೊಸ ಕಾರ್ ಭಾಗ್ಯ…!!

chamarajanagara
17/10/2023

ಚಾಮರಾಜನಗರ: ಒಂದು ಕಡೆ ಬರ ಮತ್ತೊಂದು ಕಡೆ ಕಾವೇರಿ ಸಂಕಷ್ಟ ಇದ್ದರೂ ಸಚಿವರು ಹೊಸ ಕಾರು ಖರೀದಿಸಿ ನವರಾತ್ರಿಯಲ್ಲಿ ಪೂಜೆ ಸಲ್ಲಿಸಿದ್ದಾರೆ.

ಹೌದು…, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರಿಂದು ಚಾಮರಾಜನಗರ ದಸರಾ ಉದ್ಘಾಟನೆಗೆ ಹೊಸ ಕಾರಿನಲ್ಲಿ ಬಂದಿದ್ದಾರೆ. ಟೊಯೊಟಾ ಇನ್ನೋವಾ ಹೈ ಕ್ರಾಸ್ ( ಟಾಪ್ ಎಂಡ್)ಮಾಡೆಲ್ ನ್ನು ಸರ್ಕಾರ ಸಚಿವರಿಗೆ ಕೊಟ್ಟಿದೆ.

ನವರಾತ್ರಿ ವಿಶೇಷ ಸಂದರ್ಭ ಆಗಿರುವುದರಿಂದ ಸಚಿವರು ಹೊಸ ಕಾರಿನಲ್ಲೇ ಚಾಮರಾಜನಗರಕ್ಕೆ ಆಗಮಿಸಿ ದಸರಾಗೆ ಚಾಲನೆ ಕೊಟ್ಟಿದ್ದಾರೆ‌.  ಒಟ್ಟಿನಲ್ಲಿ ಬರ ಎನ್ನುತ್ತಿರುವ ಸರ್ಕಾರ ಹೊಸ ಕಾರು ಖರೀದಿ ಮಾಡಬೇಕಿತ್ತೇ ಎಂಬ ಟೀಕೆ ವ್ಯಕ್ತವಾಗಿದೆ.

ಇತ್ತೀಚಿನ ಸುದ್ದಿ

Exit mobile version