ತಂದೆಯ ಕಾರಿನಡಿಗೆ ಸಿಲುಕಿ ಒಂದೂವರೆ ವರ್ಷದ ಮಗು ಸಾವು!

car
23/04/2024

ಬೆಂಗಳೂರು:  ತಂದೆಯ ಕಾರಿನಡಿಗೆ ಸಿಲುಕಿ ಒಂದೂವರೆ ವರ್ಷದ ಮಗುವೊಂದು ದಾರುಣವಾಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಹೆಚ್‌.ಎಸ್‌.ಆರ್‌. ಲೇಔಟ್‌‌ ನಲ್ಲಿ ನಡೆದಿದೆ.

ಸಂಬಂಧಿಕರ ಮದುವೆಗೆ ಹೋಗಿ ಬಂದ ಕುಟುಂಬ ಲಗೇಜ್ ಎಲ್ಲವನ್ನೂ ಮನೆಯೊಳಕ್ಕೆ ಇಟ್ಟಿದ್ದರು. ಆ ಬಳಿಕ ಮಗು ತನ್ನ ತಂದೆಯ ಹಿಂದೆಯೇ ಓಡಿ ಬಂದು ಕಾರಿನ ಡೋರ್ ಬಳಿ ನಿಂತುಕೊಂಡಿದೆ.  ಕಾರಿನಲ್ಲಿದ್ದ ತಂದೆಗೆ ಬದಿಯಲ್ಲಿದ್ದ ಮಗು ಕಾಣಿಸಿರಲಿಲ್ಲ, ಕಾರು ಮುಂದೆ ಚಲಾಯಿಸಿದ ವೇಳೆ ಮಗು ಕಾರಿನಡಿಗೆ ಸಿಲುಕಿದೆ.

ಘಟನೆಯಲ್ಲಿ ಮೃತಪಟ್ಟ ಮಗುವನ್ನು ಶೈಜಾ ಜನ್ನತ್( ಒಂದೂವರೆ ವರ್ಷ) ಎಂದು ಗುರುತಿಸಲಾಗಿದೆ. ಕಾರಿನಡಿಗೆ ಸಿಲುಕಿ ಗಾಯಗೊಂಡಿದ್ದ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಮಗು ಬದುಕುಳಿಯಲಿಲ್ಲ.

ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ ರಾತ್ರಿ 11:30 ಕ್ಕೆ ನಡೆದ ಘಟನೆ, ತಡವಾಗಿ ಬೆಳಕಿಗೆ ಬಂದಿದೆ. ಸಂಬಂಧಿಗಳ ಮದುವೆ ಇದ್ದ ಕಾರಣ ಕುಟುಂಬ ಸಮೇತವಾಗಿ ಚನ್ನಪಟ್ಟಣಕ್ಕೆ ಹೋಗಿ ವಾಪಸ್​ ಬಂದ ಬಳಿಕ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಎಚ್.ಎಸ್.ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version