ಪೌರ ಕಾರ್ಮಿಕರಿಗೆ ಗನ್ ತೋರಿಸಿ ಬೆದರಿಸಿದ ಬಿಜೆಪಿ ಶಾಸಕನ ಸಂಬಂಧಿ!

ಕಸ ವಿಂಗಣೆಯ ವಿಚಾರಲ್ಲಿ ಪೌರ ಕಾರ್ಮಿಕರನ್ನು ಉದ್ಯಮಿಯೊಬ್ಬ ಗನ್ ತೋರಿಸಿ ಬೆದರಿಸಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಪೌರ ಕಾರ್ಮಿಕರು ಪೆಟ್ರೋಲ್ ಮಾಲಿಕ ಹಾಗೂ ಬಿಜೆಪಿ ಶಾಸಕ ಮನೋಜ್ ಪಟೇಲ್ ಸಂಬಂಧಿ ಮಹೇಶ್ ಎಂಬವರ ಮನೆಯಲ್ಲಿ ಕಸ ಸಂಗ್ರಹಿಸುತ್ತಿದ್ದರು. ಇದೇ ವೇಳೆ ಒಣ ಕಸ ಹಾಗೂ ಹಸಿ ಕಸವನ್ನು ವಿಂಗಡಿಸುವಂತೆ ಪಟೇಲ್ ಪತ್ನಿಗೆ ಪೌರ ಕಾರ್ಮಿಕರು ತಿಳಿಸಿದ್ದಾರೆ. ಆದರೆ ಇದು ಅವರಿಗೆ ಇಷ್ಟವಾಗದ ಕಾರಣ, ಪೌರ ಕಾರ್ಮಿಕರ ಜೊತೆಗೆ ಗಲಾಟೆ ನಡೆಸಿದ್ದು, ಅಷ್ಟೂ ಸಾಲದೆಂಬಂತೆ ಮಹೇಶ್ ಮನೆಯೊಳಗಿದ್ದ ಗನ್ ತಂದು ಗಾಳಿಯಲ್ಲಿ ಗುಂಡು ಹಾರಿಸಿ ಪೌರ ಕಾರ್ಮಿಕರನ್ನು ಬೆದರಿಸಿದ್ದಾರೆ.
ನಂತರ ಸ್ಧಳಕ್ಕೆ ಆಗಮಿಸಿದ ಪೋಲಿಸ್ ಅಧಿಕಾರಿಯೊಬ್ಬರು ಎರಡು ಕಡೆಯವರ ನಡುವೆ ಮಾತು ಕತೆ ನಡೆಸಿ ಕಳುಹಿಸಿದ್ದಾರೆ. ನಂತರ ಕಸದ ವ್ಯಾನ್ ಗಳನ್ನು ನಿರ್ವಹಿಸುವ ಚಾಲಕರ ಸಂಘದ ಸದಸ್ಯರು ಬೆದರಿಕೆಗೆ ಒಳಗಾದ ನೈರ್ಮಲ್ಯ ಕಾರ್ಮಿಕರೊಂದಿಗೆ ಪೊಲೀಸರನ್ನು ಸಂಪರ್ಕಿಸಿ ಲಿಖಿತ ದೂರು ಸಲ್ಲಿಸಿದರು.
ಉದ್ಯಮಿ ಬಿಜೆಪಿಯ ಮಾಜಿ ಶಾಸಕ ಮನೋಜ್ ಪಟೇಲ್ ಅವರ ಸಂಬಂಧಿ ಎಂಬ ಕಾರಣಕ್ಕೆ ಪೊಲೀಸರು ಈ ಪ್ರಕರಣದಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಹಿರಿಯ ಪೊಲೀಸ್ ಅಧಿಕಾರಿ ಆಶಿಶ್ ಮಿಶ್ರಾ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw