12:59 AM Saturday 23 - August 2025

ಗುದದ್ವಾರಕ್ಕೆ ಗಾಳಿ ತುಂಬಿಸಿದ ಪಾಪಿ: ಸಾವು ಬದುಕಿನ ನಡುವೆ ಹೋರಾಡುತ್ತಿರುವ ಬಾಲಕ!

crime
26/04/2024

ಆಂಧ್ರಪ್ರದೇಶ: ವ್ಯಕ್ತಿಯೋರ್ವನ ವಿಕೃತಿಯಿಂದಾಗಿ ಬಾಲಕನೋರ್ವ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಶ್ರೀರಾಮುಲು ಅನಿಕೆಪಲ್ಲಿಯಲ್ಲಿ ನಡೆದಿದೆ.

ವಾಲಿಬಾಲ್ ಆಡುತ್ತಿದ್ದ ವೇಳೆ ಬಾಲ್ ನಲ್ಲಿ ಗಾಳಿ ಖಾಲಿಯಾಗಿದೆ ಎಂದು ಗಾಳಿ ತುಂಬಿಸಲು ಹೋಗಿದ್ದ 12 ವರ್ಷದ ಬಾಲಕನನ್ನು ಹಿಡಿದು ವ್ಯಕ್ತಿಯೋರ್ವ ಆತನ ಗುದದ್ವಾರಕ್ಕೆ ಗಾಳಿ ತುಂಬಿಸಿದ್ದು, ಪರಿಣಾಮವಾಗಿ ಬಾಲಕ ಸ್ಥಳದಲ್ಲೇ ಕುಸಿದು ಬಿದ್ದು ಅಸ್ವಸ್ಥನಾಗಿದ್ದಾನೆ. ಇದೀಗ ಬಾಲಕ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

12 ವರ್ಷದ ಶ್ರೀಪೊಟ್ಟಿ ಶ್ರೀರಾಮುಲು ಎಂಬ ಬಾಲಕ ಬುಧವಾರ ತನ್ನ ಸ್ನೇಹಿತರೊಂದಿಗೆ ವಾಲಿಬಾಲ್ ಆಡುತ್ತಿದ್ದ. ಈ ವೇಳೆ ಬಾಲ್ನಲ್ಲಿ ಗಾಳಿ ಖಾಲಿಯಾಗಿದೆ. ಮಕ್ಕಳು ಗಾಳಿ ತುಂಬಿಸಲು ಏರ್ ಪಂಪ್ ಗಾಗಿ ಸಮೀಪದ ಗ್ರಾಮದ ವಾಲಿಬಾಲ್ ಆಡುವ ಯುವಕರ ಬಳಿಗೆ ತೆರಳಿದ್ದಾರೆ. ಅಲ್ಲಿದ್ದ ರಾಜಾ ಎನ್ನುವ ವ್ಯಕ್ತಿ ಶ್ರೀರಾಮುಲು ಅನ್ನು ಬಲವಂತವಾಗಿ ಹಿಡಿದು ಆತನ ಗುದದ್ವಾರದೊಳಗೆ ಗಾಳಿ ತುಂಬಿಸಿದ್ದಾನೆ.

ಇದರಿಂದಾಗಿ ಬಾಲಕ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ವಿಷಯ ತಿಳಿದ ಸ್ಥಳೀಯರು ತಕ್ಷಣ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಆರೋಪಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version