ಕಾಡೆಮ್ಮೆ ಮಾಂಸ ಕಿತ್ತು ತಿಂದ ವ್ಯಾಘ್ರ: ಹಿಮಗಿರಿಯಲ್ಲಿ ಬೆಟ್ಟದ ಹುಲಿ ಕಂಡ ಭಕ್ತರು

ಚಾಮರಾಜನಗರ: ರಾಜ್ಯದ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಹುಲಿಯೊಂದು ಕಾಡೆಮ್ಮೆ ಮಾಂಸವನ್ನು ಕಿತ್ತು ತಿಂದಿದ್ದು ದೃಶ್ಯ ಕಂಡ ಭಕ್ತರು ರೋಮಾಂಚಿತರಾಗಿದ್ದಾರೆ.
ಗೋಪಾಲಸ್ವಾಮಿ ಬೆಟ್ಟದಿಂದ ಹಿಂತಿರುಗುವಾಗ ಗುಡ್ಡವೊಂದರಲ್ಲಿ ಕಾಡೆಮ್ಮೆಯ ತಲೆ ಭಾಗವನ್ನು ಕಿತ್ತು ಹುಲಿರಾಯ ಎಳೆದೊಯ್ದಿದೆ.
ಬಸ್ಸಿನಲ್ಲಿ ಬೆಟ್ಟಕ್ಕೆ ತೆರಳುವಾಗ ಈ ಹುಲಿ ಆಗಾಗ್ಗೆ ಭಕ್ತರಿಗೆ ಕಾಣಿಸಿಕೊಳ್ಳಲಿದ್ದು ಬೆಟ್ಟದ ಹುಲಿ ಎಂಥಲೇ ಫೇಮಸ್ ಆಗಿದೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಸದಾ ಹಿಮದಿಂದ ಆವೃತವಾಗಿರಲಿದ್ದು ಕರ್ನಾಟಕದ ಕಾಶ್ಮೀರದಂತೆ ಭಾಸವಾಗಲಿದೆ, ಪ್ರಕೃತಿ ಸೌಂದರ್ಯದ ಜೊತೆಗೆ ಹುಲಿ ದರ್ಶನವೂ ಆಗಿರುವುದು ಭಕ್ತರಿಗೆ ಡಬಲ್ ಧಮಾಕಾ ಸಿಕ್ಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw