ನಾಗರ ಹಾವಿನ ಹುಟ್ಟುಹಬ್ಬ ಆಚರಿಸಿ ಜೈಲುಪಾಲಾದ ಯುವಕ!

nagara birthday
18/08/2025

ಧುಲೆ (ಮಹಾರಾಷ್ಟ್ರ): ನಾಗರ ಪಂಚಮಿ ದಿನ ನಾಗರ ಹಾವನ್ನು ಹಿಡಿದು ತಂದು, ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸಿದ್ದ ಯುವಕನನ್ನು  ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬಂಧಿಸಿ ಕ್ರಮಕೈಗೊಂಡಿರುವ ಘಟನೆ ನಡೆದಿದೆ.

ಮಹಾರಾಷ್ಟ್ರದ ಧುಲೆಯಲ್ಲಿ ಈ ಘಟನೆ ವರದಿಯಾಗಿದೆ. ಬಂಧಿತ ಯುವಕನನ್ನು ಧುಲೆ ಜಿಲ್ಲೆಯ ಶಿರ್ಪುರ್ ತಾಲೂಕಿನ ಬೋರೆಡಿ ಗ್ರಾಮದ ನಿವಾಸಿ ರಾಜ್ ಸಾಹೇಬ್​ ರಾವ್ ವಾಘ್ ಎಂದು ಗುರುತಿಸಲಾಗಿದೆ.

ಕಳೆದ ತಿಂಗಳು, ನಾಗರ ಪಂಚಮಿಯ ದಿನದಂದು ವಾಘ್ ಗ್ರಾಮದ ಬಳಿ ನಾಗರಹಾವನ್ನು ಹಿಡಿದು, ಅದನ್ನು ಮನೆಗೆ ತಂದ ಯುವಕ, ಬಳಿಕ ಕೇಕ್ ಕತ್ತರಿಸಿ ಅದರ ಹುಟ್ಟುಹಬ್ಬ ಆಚರಿಸಿದ್ದ. ನಂತರ ಇನ್‌ ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಅಪ್‌ ಲೋಡ್ ಮಾಡಿದ್ದ. ಈ ವಿಡಿಯೋ ವೈರಲ್ ಆಗಿದ್ದು, ಇದನ್ನು ಗಮನಿಸಿದ ಅರಣ್ಯಾಧಿಕಾರಿಗಳು ಯುವಕ ರಾಜ್ ಸಾಹೇಬ್​ ರಾವ್​ನನ್ನು ಬಂಧಿಸಿದ್ದಾರೆ.

ಯುವಕನ ಮನೆಯಿಂದ ಎರಡು ಪ್ಲಾಸ್ಟಿಕ್ ಪೆಟ್ಟಿಗೆಗಳು ಮತ್ತು ವಿಡಿಯೋ ರೆಕಾರ್ಡ್​​ ಮಾಡಲು ಬಳಸಿದ್ದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಯುವಕನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಸೆಕ್ಷನ್ 9 ಮತ್ತು 51(1) ರ ಅಡಿ ಪ್ರಕರಣ ದಾಖಲಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version