ಚಾಮರಾಜನಗರ: 10 ದಿನಗಳ ಹಿಂದೆ ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ

24/11/2023
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಕಲ್ಲುಕಟ್ಟೆ ಡ್ಯಾಮ್ ನಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿರುವ ಘಟನೆ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಬಸವಾಪುರ ಗ್ರಾಮದ ಚಿಕ್ಕಶೆಟ್ಟಿ ಎಂಬವರ ಪುತ್ರ ಮಹೇಶ್(21) ಮೃತ ದುರ್ದೈವಿ. ಕಳೆದ 10 ದಿನಗಳ ಹಿಂದಷ್ಟೇ ಯುವಕನು ಕಾಣೆಯಾಗಿರುವ ಕುರಿತು ಪೋಷಕರು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇಂದುಕಲ್ಲುಕಟ್ಟೆ ಡ್ಯಾಮ್ ನಲ್ಲಿ ಶವವೊಂದು ತೇಲುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಕಾಣೆಯಾದ ಯುವಕ ಮಹೇಶ್ ಎಂದು ಖಾತ್ರಿಯಾಗಿದೆ. ಘಟನೆ ಸಂಬಂಧ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.