ಮಹಿಳೆಯ ಅತ್ಯಾಚಾರ ನಡೆಸಿದ ಸ್ಥಳದಲ್ಲಿ ನಿಲ್ಲಿಸಿದ್ದ ಬಸ್ ಗಳಲ್ಲಿ ಕಾಂಡೋಮ್ ಗಳ ರಾಶಿ ಪತ್ತೆ

pune rape case
27/02/2025

ಪುಣೆ: ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿ 26 ವರ್ಷದ ಯುವತಿಯ ಮೇಲೆ ಬಸ್ ನಲ್ಲೇ ಅತ್ಯಾಚಾರ ನಡೆಸಿದ ಘಟನೆ ಪುಣೆಯ(Pune) ಸ್ವರ್ಗೇಟ್ ಎಸ್ ಟಿ ಬಸ್ ನಿಲ್ದಾಣದಲ್ಲಿ ನಡೆದಿತ್ತು. ಇದೀಗ ಈ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಬಸ್ ಗಳ ಒಳಗಿನ ದೃಶ್ಯ ಕಂಡು ಜನ ಬೆಚ್ಚಿಬಿದ್ದಿದ್ದಾರೆ.

ಈ ಪ್ರದೇಶದಲ್ಲಿ ಬಳಕೆಯಾಗದ ಬಸ್ ಗಳನ್ನು ನಿಲ್ಲಿಸಲಾಗಿದ್ದು, ಈ  ಎಲ್ಲ ಬಸ್ ಗಳಲ್ಲೂ ರಾಶಿರಾಶಿ ಕಾಂಡೋಮ್(Condoms) ಗಳು ಮದ್ಯದ ಬಾಟಲಿಗಳು, ಮಹಿಳೆಯರ ಬಟ್ಟೆಗಳು, ಸಿಗರೇಟ್ ಪ್ಯಾಕ್ ಗಳು ಪತ್ತೆಯಾಗಿದ್ದು, ಇದೊಂದು ಅನೈತಿಕ ಚಟುವಟಿಕೆಗಳ ತಾಣವಾಗಿತ್ತು ಎನ್ನುವುದನ್ನು ಇಲ್ಲಿನ ದೃಶ್ಯ ಸ್ಪಷ್ಟಪಡಿಸಿದೆ.

ಘಟನೆಯ ವಿವರ:

26 ವರ್ಷದ ಯುವತಿ ಗೃಹಿಣಿಯಾಗಿದ್ದು, ಸತಾರಾ ಜಿಲ್ಲೆಯ ತನ್ನ ಸ್ವಂತ ಗ್ರಾಮವಾದ ಫಾಲ್ಟನ್‌ ಗೆ ಪ್ರಯಾಣಿಸುತ್ತಿದ್ದಳು. ಬೆಳಿಗ್ಗೆ 5.45 ರಿಂದ ಬೆಳಿಗ್ಗೆ 6.30 ನಡುವೆ ಆರೋಪಿ ರಾಮ್ ದಾಸ್ ಮಹಿಳೆಯ ಜೊತೆಗೆ ಮಾತನಾಡಿದ್ದು, ದೀದಿ(ಸಹೋದರಿ) ಎಂದು ಸಂಬೋಧಿಸಿ ಗೌರವಯುತ ವ್ಯಕ್ತಿಯಂತೆ ನಟಿಸಿದ್ದಾನೆ.

ಬಳಿಕ ಊರಿಗೆ ತೆರಳುವ ಬಸ್ ಎಂದು ನಿಲ್ಲಿಸಿದ್ದ ಬಸ್ ನ್ನು ತೋರಿಸಿ ಕರೆದೊಯ್ದಿದ್ದಾನೆ. ಈ ವೇಳೆ ಮಹಿಳೆ ಈ ಬಸ್ ನಲ್ಲಿ ಲೈಟ್ ಇಲ್ಲ ಎಂದು ಅನುಮಾನ ವ್ಯಕ್ತಪಡಿಸಿದ  ವೇಳೆ, ಇತರ ಪ್ರಯಾಣಿಕರು ಮಲಗಿದ್ದಾರೆ ಹಾಗಾಗಿ ಲೈಟ್ ಆರಿಸಲಾಗಿದೆ ಎಂದಿದ್ದಾನೆ. ಇದನ್ನು ನಂಬಿ ಮಹಿಳೆ ಬಸ್ ಏರಿದ ವೇಳೆ, ಏಕಾಏಕಿ ಬಸ್ ನೊಳಗೆ ಹಾರಿದ ಆರೋಪಿ ಬಸ್ ನ ಡೋರ್ ಲಾಕ್ ಮಾಡಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ

Exit mobile version