11:01 PM Thursday 4 - September 2025

ಲೇಡಿಸ್ ಪಿಜಿಗೆ ನುಗ್ಗಿ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿಯ ಬಂಧನ

naresh
04/09/2025

ಬೆಂಗಳೂರು: ಲೇಡಿಸ್ ಪಿಜಿಗೆ ನುಗ್ಗಿ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆಂಧ್ರದ ಮದನ ಪಲ್ಲಿ ಮೂಲದ ಕೆ. ನರೇಶ್ ಪಟ್ಯಂ ಬಂಧಿತ ಆರೋಪಿಯಾಗಿದ್ದಾನೆ.  ಬೆಂಗಳೂರು ನಗರದ ಸುದ್ದಗುಂಟೆಪಾಳ್ಯದ ಲೇಡಿಸ್ ಪಿ.ಜಿಗೆ ನುಗ್ಗಿದ್ದ ಆರೋಪಿ, ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ.

ಕೆ. ನರೇಶ್ ಪಟ್ಯಂ ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡು ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದಾನೆ. ಡೆಲಿವರಿ ಬಾಯ್ ಮಾತ್ರವಲ್ಲದೇ ಈತ ಕಳ್ಳತನವೂ ಮಾಡಿಕೊಂಡಿದ್ದ.  ಈತನ ವಿರುದ್ಧ ಮದನಪಲ್ಲಿಯಲ್ಲಿ ಕೂಡ ಎರಡು ಮೊಬೈಲ್ ಕಳ್ಳತನ ಪ್ರಕರಣಗಳಿವೆ.

ಪಿಜಿಗೆ ನುಗ್ಗಿ ಕಳ್ಳತನ ಮಾಡಿ ಯುವತಿಗೆ ಲೈಂಗಿಕ ಕಿರುಕುಳ ನೀಡಿ, ಹಲ್ಲೆ ಮಾಡಿ ಪರಾರಿಯಾಗಿದ್ದ ನರೇಶ್ ನನ್ನು ಸಿಸಿಟಿವಿ ಆಧಾರದ ಮೇಲೆ ಸುದ್ದಗುಂಟೆ ಪಾಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೂಮ್ ಮೇಟ್ ಎಂದು ಭಾವಿಸಿದ್ದ ಯುವತಿ:

ಪಿಜಿಯಲ್ಲಿ ಮಲಗಿದ್ದ ಯುವತಿಯ ರೂಮಿಗೆ ಆರೋಪಿ ನುಗ್ಗಿದ್ದ. ಆದ್ರೆ, ಯುವತಿ ಮೊದಲು ತನ್ನ ರೂಮ್‌ ಮೇಟ್ ಎಂದು ಭಾವಿಸಿ ಸುಮ್ಮನೆ ಮಲಗಿದ್ದಳು. ಬಳಿಕ ಪಿಜಿಯಲ್ಲಿನ ಎಲ್ಲಾ ರೂಮ್‌ಗ ಳ ಬಾಗಿಲುಗಳನ್ನು ಲಾಕ್ ಮಾಡಿದ ನಂತರ ನೇರವಾಗಿ ಯುವತಿಯ ಬಳಿ ಹೋಗಿ ಅವಳ ಮೈಮೇಲೆ ಕೈ ಹಾಕಿದ್ದಾನೆ. ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದಾಗ, ಆರೋಪಿ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ. ಈ ವೇಳೆ ಯುವತಿ ಕೂಗಾಡಿದ್ದಾಳೆ. ಆಗ ಆರೋಪಿ ಯುವತಿಯನ್ನು ಬಿಟ್ಟು, ರೂಮಿನಲ್ಲಿ ಇಟ್ಟುಕೊಂಡಿದ್ದ 2,500 ನಗದು ಕದ್ದುಕೊಂಡು ಸ್ಥಳದಿಂದ ಎಸ್ಕೇಪ್ ಆಗಿದ್ದ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version