7:55 PM Wednesday 21 - January 2026

ಬಿಗ್ ಬ್ರೇಕಿಂಗ್ ನ್ಯೂಸ್:  ಖ್ಯಾತ ನಟ ಸೋನುಸೂದ್ ಕಚೇರಿ ಮೇಲೆ ಐಟಿ ದಾಳಿ

sonu sood
15/09/2021

ಮುಂಬೈ: ಖ್ಯಾತ ನಟ, ಸಮಾಜ ಸೇವಕ ಸೋನುಸೂದ್ ಅವರ ಮುಂಬೈಯ ಕಚೇರಿಗೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ಸೋನುಸೂದ್ ಅವರ ಆದಾಯದ ಮೂಲಗಳಿಗೆ ಸಂಬಂಧಿಸಿದಂತೆ ಅವರ ಕಚೇರಿಯಲ್ಲಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

ಕೊವಿಡ್ 19 ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಬಳಿಕ ಜನ ಸೇವೆಯ ಮೂಲಕ ದೇಶಾದ್ಯಂತ ಹೆಸರು ವಾಸಿಯಾಗಿದ್ದು, ಅಪಾರ ಅಭಿಮಾನಿಗಳನ್ನೂ ಗಳಿಸಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೋನುಸೂದ್ ಹೆಸರು ಪ್ರಖ್ಯಾತಿಗೊಂಡಿತ್ತು. ಇತ್ತೀಚೆಗೆ ದೆಹಲಿ ಸರ್ಕಾರದ ‘ದೇಶ್ ಕೆ ಮಂಟರ್ಸ್’ ನ ಬ್ರಾಂಡ್ ಅಂಬಾಸಿಡರ್ ಆಗಿ ಅವರು ನೇಮಕಗೊಂಡಿದ್ದರು.

ಇತ್ತೀಚೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಅವರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ವಿಚಾರವಾಗಿ ಬಹಳಷ್ಟು ಊಹಾಪೋಹಗಳ ಸುದ್ದಿಗಳು ಸೋನುಸೂದ್ ಅವರ ಬಗ್ಗೆ ಕೇಳಿ ಬಂದಿತ್ತು. ಸೋನುಸೂದ್ ಆಮ್ ಆದ್ಮಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ ಎಂದೂ ಚರ್ಚೆಯಾಗಿತ್ತು. ಈ ನಡುವೆ ಐಟಿ ಕಣ್ಣು ಸೋನುಸೂದ್ ಮೇಲೆ ಬಿದ್ದಿದೆ ಎಂದು ಸದ್ಯ ಚರ್ಚೆಗೀಡಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ಇನ್ನಷ್ಟು ಸುದ್ದಿಗಳು…

ಬಟ್ಟೆ ಬದಲಿಸುತ್ತಿದ್ದ ವಿಡಿಯೋ ಮಾಡಿ, ಬೆದರಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ

ತೆನೆಇಳಿಸಿ ಕೈ ಹಿಡಿಯುತ್ತಾರಾ ಜೆಡಿಎಸ್ ನ ಮತ್ತೋರ್ವ ಶಾಸಕ?

ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ ಸಿದ್ದರಾಮಯ್ಯ ಮೇಲೆ ಮುಗಿಬಿದ್ದ ಬಿಜೆಪಿ ಸದಸ್ಯರು!

ಕೃಷಿ ಅಧ್ಯಯನಕ್ಕಾಗಿ ಫಾರ್ಮ್ ಹೌಸ್ ಗೆ ಹೋಗಿದ್ದ ವೈದ್ಯೆ ಕೃಷಿ ಹೊಂಡದಲ್ಲಿ ಮುಳುಗಿ ಸಾವು!

ಫ್ಲೈಓವರ್ ಮೇಲೆ ಬೈಕ್ ಗೆ ಡಿಕ್ಕಿ ಹೊಡೆದ ಕಾರು: 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಬೈಕ್ ಸವಾರರು

6 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ ಆರೋಪಿಯನ್ನು ಎನ್ ಕೌಂಟರ್ ಮಾಡುತ್ತೇವೆ | ತೆಲಂಗಾಣ ಸಚಿವ ಬಹಿರಂಗ ಹೇಳಿಕೆ

ಅವಸರದಿಂದ ದೇವಸ್ಥಾನಗಳನ್ನು ಒಡೆಯಬೇಡಿ: ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ

 

ಇತ್ತೀಚಿನ ಸುದ್ದಿ

Exit mobile version