7:35 AM Wednesday 22 - October 2025

ಆಟೋ ಓಡಿಸುವ ಮೂಲಕ ಸುದ್ದಿಯಾದ ನಟಿ ರಾಧಿಕಾ ಕುಮಾರಸ್ವಾಮಿ: ಯಾವ ಸಿನಿಮಾದ ಪ್ರಮೋಷನ್ ಇದು?

radhika
16/09/2024

ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ಅವರು ಇಂದು ಸ್ವತಃ ಆಟೋ ಓಡಿಸುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಸೃಷ್ಟಿಸಿದರು. ತಮ್ಮ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದ ಬಳಿ ಇಂದು ಅವರು ತಮ್ಮ ನಿರ್ಮಾಣದ ‘ಭೈರಾದೇವಿ’ ಸಿನಿಮಾದ ಪ್ರಚಾರಕ್ಕೆ ಚಾಲನೆ ನೀಡಿದರು.

ಇದೇ ವೇಳೆ ಸ್ವತಃ ಆಟೋ ಚಲಾಯಿಸಿದ ರಾಧಿಕಾ, ಆಟೋದ ಹಿಂದೆ ‘ಭೈರಾದೇವಿ’ ಸಿನಿಮಾದ ಪೋಸ್ಟರ್ ಅಂಟಿಸಿ ಪ್ರಚಾರಕ್ಕೆ ಮೊದಲ ಹೆಜ್ಜೆ ಇಟ್ಟರು.

ರಾಧಿಕಾ ಕುಮಾರಸ್ವಾಮಿ ಅವರು ಶಮಿಕಾ ಎಂಟರ್​ಪ್ರೈಸಸ್ ಮೂಲಕ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.  ದಮಯಂತಿ ಸಿನಿಮಾದ ನಂತರ ಇದೀಗ ಭೈರಾದೇವಿ ಸಿನಿಮಾವನ್ನು ಮಾಡುತ್ತಿದ್ದಾರೆ.

ಅಂದ ಹಾಗೆ ಭೈರಾದೇವಿ ಸಿನಿಮಾದಲ್ಲಿ ರಾಧಿಕಾ ಅವರು ನಟಿಸಿದ್ದಾರೆ ಕೂಡ. ಒಂದು ವಿಭಿನ್ನ ಪಾತ್ರದಲ್ಲಿ ಅವರು ಈ ಬಾರಿ ನಟನೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಮಹಿಳಾ ಅಘೋರಿಯಾಗಿ ರಾಧಿಕಾ ಅಭಿನಯಿಸಿದ್ದಾರೆ. ಚಿತ್ರದ ಟೀಸರ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಸಿನಿಮಾದಲ್ಲಿ ರಮೇಶ್ ಅರವಿಂದ್, ರಂಗಾಯಣ ರಘು, ರವಿಶಂಕರ್, ಸ್ಕಂದ, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಗಣ‌ ಇದೆ.  ಈ ಹಿಂದೆ ‘ಆರ್ ಎಕ್ಸ್ ಸೂರಿ’ ಸಿನಿಮಾ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ಶ್ರೀಜೈ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

“ಭೈರಾದೇವಿ” ಅಕ್ಟೋಬರ್ 3 ರಂದು ಅದ್ಧೂರಿಯಾಗಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ನಾಡಹಬ್ಬ ನವರಾತ್ರಿಯ ಮೊದಲ ದಿನವೇ ಈ ಚಿತ್ರ ಬಿಡುಗಡೆ ಆಗುತ್ತಿರುವುದು ವಿಶೇಷ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version