5:28 PM Wednesday 10 - December 2025

ಆಧಾರ್ ಕಾರ್ಡ್ ನಲ್ಲಿ ಊಟದ ಮೆನು | ಮದುವೆಗೆ ಹೋದವರು ಸುಸ್ತೋ ಸುಸ್ತು

04/02/2021

ಕೋಲ್ಕತ್ತಾ: ನವಜೋಡಿಗಳಿಬ್ಬರು ತಮ್ಮ ಮದುವೆಯಂದು ಮೆನು ಕಾರ್ಡ್ ನ್ನು ಆಧಾರ್ ಕಾರ್ಡ್ ನಂತೆ ಮುದ್ರಿಸಿ ಅತಿಥಿಗಳಿಗೆ ನೀಡಿದ್ದು, ಮದುವೆಗೆ ಬಂದವರನ್ನು, ಇದೇನು ನಮಗೆ ಆಧಾರ್ ಕಾರ್ಡ್ ನೀಡುತ್ತಿದ್ದಾರೆ ಎಂದು ಕೆಲ ಕಾಲ ಗೊಂದಲಕ್ಕೀಡು ಮಾಡಿದ್ದಾರೆ.

ಗೋಗೋಲ್ ಸಹಾ ಮತ್ತು ಸುವರ್ಣ ದಾಸ್ ತಮ್ಮ ಮದುವೆಯಲ್ಲಿ ಇಂತಹದ್ದೊಂದು ಪ್ರಯೋಗ ಮಾಡಿದ್ದಾರೆ. ಮೆನು ಕಾರ್ಡ್ ನ್ನು ಆಧಾರ್ ಕಾರ್ಡ್ ನಂತೆ ಡಿಸೈನ್ ಮಾಡಿಸಿ, ಅದರಲ್ಲಿ ವಿವಿಧ ಆಹಾರ ಪದಾರ್ಥಗಳ ಹೆಸರನ್ನು ಹಾಕಿದ್ದಾರೆ.

ಈ ವಿಭಿನ್ನ ಮೆನುವನ್ನು ಮದುಗೆ ಹೋದ ವ್ಯಕ್ತಿಯೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಾವು ಡಿಜಿಟಲ್ ಇಂಡಿಯಾಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂತಹದ್ದೊಂದು ಮೆನುವನ್ನು ಹಂಚಿಕೊಂಡಿದ್ದೇವೆ ಎಂದು ಗೂಗೋಲ್ ಸಹಾ  ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version