1:17 PM Saturday 24 - January 2026

ಅಫ್ಘಾನ್ ಪ್ರಜೆಯನ್ನು ಹೆಲಿಕಾಫ್ಟರ್ ನಲ್ಲೇ ನೇಣಿಗೇರಿಸಿದ ತಾಲಿಬಾನಿಗಳು

afghanistan
31/08/2021

ಕಾಬುಲ್: ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆಯನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ಬಳಿಕ ಇದೀಗ ತಾಲಿಬಾನಿಗಳ ಅಟ್ಟಹಾಸ ಆರಂಭವಾಗಿದ್ದು, ಮಾನವ ಜೀವಗಳಿಗೆ ಒಂದಿಷ್ಟೂ ಬೆಲೆ ನೀಡದೇ ತಾಲಿಬಾನಿಗಳು ಹತ್ಯೆ ನಡೆಸಲು ಆರಂಭಿಸಿದ್ದಾರೆ.

 

ಅಮೆರಿಕ ಸೇನೆ ಅಫ್ಘಾನಿಸ್ತಾನ ತೊರೆದ ಬಳಿಕ ಅಮೆರಿಕ ಸೇನೆಗೆ ಭಾಷಾಂತರಿಯಾಗಿ ಕೆಲಸ ಮಾಡುತ್ತಿದ್ದ ಅಫ್ಘಾನ್ ಪ್ರಜೆಯನ್ನು ಉಗ್ರರು ಭೀಕರವಾಗಿ ನೇಣಿಗೇರಿಸಿದ್ದು, ಹೆಲಿಕಾಪ್ಟರ್ ಗೆ ನೇತು ಹಾಕಿ ಆಗಸದಲ್ಲಿ ಮೆರವಣಿಗೆ ನಡೆಸಿದ ಅಮಾನವೀಯ ಘಟನೆ ನಡೆದಿದೆ. ಅಮೆರಿಕ ಸೇನೆಗೆ ಸೇರಿದ ಹೆಲಿಕಾಫ್ಟರ್ ನಲ್ಲಿಯೇ ಈ ಕೃತ್ಯವನ್ನು ತಾಲಿಬಾನಿಗಳು ನಡೆಸಿದ್ದಾರೆ.

 

ಮಾಹಿತಿಗಳ ಪ್ರಕಾರ, ಅಮೆರಿಕ ಸೇನೆ, ತಮಗೆ ಸಹಾಯ ಮಾಡಿದವರ ಪಟ್ಟಿಯನ್ನು ತಾಲಿಬಾನಿಗಳ ಕೈಗೆ ನೀಡಿದೆ ಎಂದು ಆರೋಪಿಸಲಾಗುತ್ತಿದೆ. ಹೀಗಾಗಿ, ತಾಲಿಬಾನಿಗಳು ಒಬ್ಬೊಬ್ಬರನ್ನು ಹಿಡಿದು ಭೀಕರವಾಗಿ ಶಿಕ್ಷಿಸಲು ಮುಂದಾಗಿದೆ.

 

ಅಮೆರಿಕ ಸೇನೆ ಮಾಡಿದ ಈ ದುಷ್ಟತನದಿಂದಾಗಿ ಇದೀಗ ಉಗ್ರರನ್ನು ಸದೆಬಡಿಯಲು ಸಹಾಯ ಮಾಡಿದ್ದ ಅಫ್ಘಾನ್ ಪ್ರಜೆಗಳು ಇದೀಗ ಉಗ್ರರ ಕೈಯಿಂದ ಭೀಕರವಾಗಿ ಸಾಯುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ತನ್ನ ಸ್ವಾರ್ಥವನ್ನು ಪೂರೈಸಿಕೊಂಡ ಅಮೆರಿಕ ಸೇನೆ, ತಾನು ಹೊರಡುವಾಗ ತನಗೆ ಸಹಾಯ ಮಾಡಿದವರನ್ನು ಸಂಕಷ್ಟಕ್ಕೆ ಸಿಲುಕಿಸಿ ಹೋಗಿದೆ. ತಾಲಿಬಾನಿಗಳ ಜೊತೆಗೆ ಅಮೆರಿಕ ಸೇನೆ ಮೊದಲೇ ಇಂತಹದ್ದೊಂದು ಒಪ್ಪಂದ ಮಾಡಿಕೊಂಡಿತ್ತೇ ಎನ್ನುವ ಅನುಮಾನಗಳು ಇದೀಗ ಕೇಳಿ ಬಂದಿದೆ.

 

ಇನ್ನಷ್ಟು ಸುದ್ದಿಗಳು…

ಬುಡಕಟ್ಟು ಸಮುದಾಯದ ವ್ಯಕ್ತಿಯನ್ನು ಲಾರಿಗೆ ಕಟ್ಟಿ ಎಳೆದೊಯ್ದು ಭೀಕರ ಹತ್ಯೆ: ಪೊಲೀಸರ ಬಳಿ ಸುಳ್ಳು ಕಥೆ ಕಟ್ಟಿದ ಆರೋಪಿಗಳು

ಅಪಘಾತದಲ್ಲಿ ಶಾಸಕರ ಪುತ್ರ ಸೇರಿದಂತೆ 7 ಮಂದಿ ಸಾವು | ಅಪಘಾತಕ್ಕೂ ಮೊದಲು ಎಚ್ಚರಿಕೆ ನೀಡಿದ್ದ ಪೊಲೀಸರು

ವಿಪರೀತ ವೇಗದಿಂದ ಬಂದು ಕಾಂಪೌಂಡ್ ಗೆ ಡಿಕ್ಕಿ ಹೊಡೆದ ಕಾರು: 7 ಮಂದಿ ಬಲಿ

ಅಫ್ಘಾನಿಸ್ತಾನ ತೊರೆದ ಅಮೆರಿಕ ಸೇನೆ: ಆಗಸಕ್ಕೆ ಗುಂಡು ಹಾರಿಸಿ ಸಂಭ್ರಮಿಸಿದ ತಾಲಿಬಾನಿಗರು

ಏಳೆಂಟು ವರ್ಷದ ಪ್ರೀತಿ ನಡು ರಸ್ತೆಯಲ್ಲಿ ದುರಂತ ಅಂತ್ಯ! | ಪ್ರಿಯತಮೆಯ ಕತ್ತು ಸೀಳಿ, ತನ್ನ ಕತ್ತನ್ನೂ ಸೀಳಿಕೊಂಡ!

ವಿಮಾನದೊಳಗೆ ಸಿಗರೇಟ್ ಸೇದಿದ ಮಹಿಳೆ: ಸಹ ಪ್ರಯಾಣಿಕರು ವಿರೋಧಿಸಿದರೂ ಕ್ಯಾರೇ ಅನ್ನಲಿಲ್ಲ

ಇತ್ತೀಚಿನ ಸುದ್ದಿ

Exit mobile version