12:53 AM Saturday 23 - August 2025

ಅಹ್ಮದಾಬಾದ್ ನ ಬೀದಿಯಲ್ಲಿದ್ದ ನಿರ್ಗತಿಕರಿಗೆ ಸಹಾಯ ಮಾಡಿದ ಅಫ್ಘಾನಿಸ್ತಾನದ ಸ್ಟಾರ್ ಆಟಗಾರ: ವೀಡಿಯೋ ವೈರಲ್

13/11/2023

ಅಫ್ಘಾನಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ರಹಮಾನುಲ್ಲಾ ಗುರ್ಬಾಜ್ ಅವರು ಮುಂಜಾನೆ 3 ಗಂಟೆಗೆ ಅಹಮದಾಬಾದ್ ನ ಬೀದಿ ಬದಿಯಲ್ಲಿ ನೆಲೆಸಿದ್ದ ಜನರಿಗೆ ಸಹಾಯ ಮಾಡುತ್ತಿರುವ ಮಾನವೀಯ, ಹೃದಯ ವೈಶಾಲ್ಯ ಮೆರೆದ ಘಟನೆ ಬೆಳಕಿಗೆ ಬಂದಿದೆ.

ಗುರ್ಬಾಜ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅವರು ಆಡುವ ತಂಡವಾದ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಕೂಡ ಈ ಕ್ಲಿಪ್ ಅನ್ನು ಹಂಚಿಕೊಂಡಿದೆ. ಅಫ್ಘಾನಿಸ್ತಾನದ ತಾರೆ ರಸ್ತೆಯ ಬದಿಯಲ್ಲಿ ಮಲಗಿದ್ದ ಅಗತ್ಯವಿರುವ ಜನರಿಗೆ ಹಣವನ್ನು ನೀಡುತ್ತಿರುವುದನ್ನು ಕಾಣಬಹುದು.

“ಈ ತಿಂಗಳ ಆರಂಭದಲ್ಲಿ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಹೆರಾತ್ ಭೂಕಂಪದ ಸಂತ್ರಸ್ತರಿಗೆ ಹಣವನ್ನು ಸಂಗ್ರಹಿಸಲು ದಣಿವರಿಯದೆ ಕೆಲಸ ಮಾಡುವುದರಿಂದ ಹಿಡಿದು, ವಿದೇಶದಲ್ಲಿ ಈ ದಯೆಯ ಕಾರ್ಯದವರೆಗೆ – ನೀವು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತೀರಿ. ದೇವರು ನಿಮ್ಮನ್ನು ಆಶೀರ್ವದಿಸಲಿ, ಜಾನಿ, “ಎಂದು ಕೆಕೆಆರ್ ವೀಡಿಯೊವನ್ನು ಪೋಸ್ಟ್ ಮಾಡಿ ಬರೆದುಕೊಂಡಿದೆ.
ಅಫ್ಘಾನಿಸ್ತಾನದ ಕ್ರಿಕೆಟ್ ಆಟಗಾರನ ಈ ಹೃದಯ ವೈಶಾಲ್ಯತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಇತ್ತೀಚಿನ ಸುದ್ದಿ

Exit mobile version