9:52 AM Saturday 18 - October 2025

ಆಜಾದಿ ಘೋಷಣೆ ಕೂಗಿದ 6 ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಕೇಸ್

28/12/2020

ಲಕ್ನೋ: ಅಯೋಧ್ಯೆಯ ಸಾಕೇತ್ ಕಾಲೇಜಿನಲ್ಲಿ ಆಜಾದಿ ಘೋಷಣೆ ಕೂಗಿದ 6 ವಿದ್ಯಾರ್ಥಿಗಳ ವಿರುದ್ಧ ‘ದೇಶದ್ರೋಹ’ ಪ್ರಕರಣ ದಾಖಲಿಸಲಾಗಿದ್ದು, ಬಲಪಂಥೀಯ ಸಿದ್ಧಾಂತವಾದಿ, ಸಾಕೇತ್ ಕಾಲೇಜಿನ ಮುಖ್ಯಸ್ಥ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಯೂನಿಯನ್ ಚುನಾವಣೆ ನಡೆಸದಿರುವುದರ ವಿರುದ್ಧ ಡಿಸೆಂಬರ್ 16ರಂದು ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು ಆಜಾದಿ ಘೋಷಣೆ ಕೂಗಿದ್ದಾರೆ ಎಂದು ಮುಖ್ಯ ಶಿಕ್ಷಕ ಆರೋಪಿಸಿದ್ದು, ‘ಆಜಾದಿ ಲೆ ಕೆ ರಹೇಂಗೆ’ ಎಂದು ಹೇಳುವ ಮೂಲಕ ದೇಶದ್ರೋಹಿ ಘೋಷಣೆ ಕೂಗಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಕಾಲೇಜಿನ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಅಭಾಸ್ ಕೃಷ್ಣ ಯಾದವ್ ಸೇರಿದಂತೆ ಹಲವರ ವಿರುದ್ಧ ಮುಖ್ಯಶಿಕ್ಷಕ ದೂರು ದಾಖಲಿಸಿದ್ದಾರೆ.  ವಿದ್ಯಾರ್ಥಿ ಚುನಾವಣೆ ವ್ಯವಸ್ಥೆಯನ್ನು ನಿಷೇಧ ಮಾಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆದಿತ್ತು. ಆಜಾದಿ ಎಂದರೆ ಸ್ವಾತಂತ್ರ್ಯವಾಗಿದೆ. ಸ್ವಾತಂತ್ರ್ಯದ ಕೂಗನ್ನು ಕೂಗಿದ್ದಕ್ಕಾಗಿಯೂ ದೇಶದ್ರೋಹದ  ಪ್ರಕರಣ ದಾಖಲಿಸಲಾಗಿದೆ ಎಂದು ಸಾರ್ವಜನಿಕವಾಗಿ ತೀವ್ರ ಆಕ್ರೋಶದ ಮಾತುಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ

Exit mobile version