ಪುಲಿಕೇಶಿನಗರ: ಶಾಸಕ ಸ್ಥಾನಕ್ಕೆ ಅಖಂಡ ಶ್ರೀನಿವಾಸಮೂರ್ತಿ ರಾಜೀನಾಮೆ
ಕಾಂಗ್ರೆಸ್ ಟಿಕೆಟ್ ಕಾರಣಕ್ಕೆ ಪಕ್ಷದೊಂದಿಗೆ ಮುನಿಸಿಕೊಂಡಿರುವ ಪುಲಿಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ದಲಿತ ಶಾಸಕನಾದ ನಾನು ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಮತ ಪಡೆದ ಹೆಗ್ಗಳಿಕೆ ಹೊಂದಿದವನು. ಆದರೆ ಕಾಂಗ್ರೆಸ್ ಬಿಡುಗಡೆ ಮಾಡಿದ ಮೂರು ಪಟ್ಟಿಗಳಲ್ಲಿಯೂ ನನ್ನ ಹೆಸರಿಲ್ಲ. ಇದರಿಂದ ಅವಮಾನವಾಗಿದೆ ಎಂದಿದ್ದಾರೆ.
ಪುಲಿಕೇಶಿನಗರ ನಾನು ಹುಟ್ಟಿ ಬೆಳೆದಂತಹ ಸ್ಥಳ. ಇಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಲ್ಲಾ ಒಗ್ಗಟ್ಟಾಗಿದ್ದೀವಿ. ಆದರೆ ಯಾರದೋ ಮಾತುಗಳನ್ನು ಕೇಳಿಕೊಂಡು ನನಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿಲ್ಲ. ಕೇವಲ ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ಸಲ್ಲಿಸಿದ್ದೇನೆ. ಮುಂದೆ ನಮ್ಮ ನಾಯಕರು ಮತ್ತು ಕಾರ್ಯಕರ್ತರ ಜೊತೆ ಚರ್ಚಿಸಿನ ಮುಂದಿನ ನಡೆ ತೀರ್ಮಾನಿಸುತ್ತೇವೆ ಎಂದಿದ್ದಾರೆ.
ಹಿರಿಯ ನಾಯಕರು ನನಗೆ ಟಿಕೆಟ್ ಕೊಡಬಾರದೆಂದು ಹೇಳಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ನನ್ನ ಮನೆ ಸುಟ್ಟು ಹೋಗಿ ನಾನು ನೋವು ತಿಂದಿದ್ದೇನೆ. ಆದರೂ ನಾವಂತೂ ಯಾವುದೇ ಜಾತಿ ಬೇಧ ಮಾಡದೆ, ಅಣ್ಣ ತಮ್ಮಂದಿರಂತೆ ಇರುತ್ತೇವೆ ಎಂದು ಅವರು ಹೇಳಿದ್ದಾರೆ.
ಪುಲಿಕೇಶಿನಗರ ಮುಸ್ಲಿಂ ಮತಬಾಹುಳ್ಯದ ಕ್ಷೇತ್ರವಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಖಂಡ ಶ್ರೀನಿವಾಸಮೂರ್ತಿಯವರು 97,574 ಮತಗಳನ್ನು ಪಡೆದರೆ ಎದುರಾಳಿ ಜೆಡಿಎಸ್ ಪಕ್ಷದ ಬಿ.ಪ್ರಸನ್ನ ಕುಮಾರ್ ಕೇವಲ 15,948 ಮತಗಳನ್ನು ಪಡೆದಿದ್ದರು. ಆ ಮೂಲಕ ಅಖಂಡ ಶ್ರೀನಿವಾಸಮೂರ್ತಿಯವರು 81,626 ಮತಗಳ ಬೃಹತ್ ಅಂತರದಲ್ಲಿ ಗೆದ್ದು ಶಾಸಕರಾಗಿದ್ದರು. 2013ರಲ್ಲಿಯೂ ಅವರು ಜೆಡಿಎಸ್ ಪಕ್ಷದಿಂದ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಪುಲಿಕೇಶಿನಗರ ವ್ಯಾಪ್ತಿಯ ಡಿಜೆ ಹಳ್ಳಿ ಕೋಮು ಗಲಭೆ ನಡೆದಾಗ ಅಖಂಡ ಶ್ರೀನಿವಾಸಮೂರ್ತಿಯವರ ಮನೆಗೆ ಬೆಂಕಿ ಹಚ್ಚಲಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























