ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ತಲವಾರಿನಿಂದ ಕಡಿದು, ಚಾಕುವಿನಿಂದ ಇರಿದರು: ಸ್ನೇಹಿತರೇ ಪ್ರಾಣಕ್ಕೆ ಮುಳುವಾದರೆ

ಉಡುಪಿ: ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಅತ್ರಾಡಿ(52) ಶನಿವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಮಲ್ಪೆ ಸಮೀಪದ ಕೊಡವೂರು ಸಾಲ್ಮರ ಎಂಬಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾರೆ. ವರದಿಗಳ ಪ್ರಕಾರ ಸೈಫುದ್ದೀನ್ ಸ್ನೇಹಿತರೇ ಈ ಕೃತ್ಯವನ್ನು ನಡೆಸಿದ್ದಾರೆ ಎಂದು ಹೇಳಲಾಗಿದೆ.
ಉಡುಪಿ ಕುಕ್ಕಿಕಟ್ಟೆಯ ನಿವಾಸಿ ಫೈಝಲ್ ಖಾನ್ ಮತ್ತು ಉಡುಪಿ ದೊಡ್ಡಣಗುಡ್ಡೆ ನಿವಾಸಿ ಶರೀಫ್ ಎಂಬವರು ಈ ಕೃತ್ಯ ನಡೆಸಿದ್ದಾರೆ ಎಂದು ದೂರಲಾಗಿದೆ. ಆರೋಪಿಗಳು ಸೈಫ್ ನ ಬಸ್ ನಲ್ಲಿ ಚಾಲಕರಾಗಿ ದುಡಿಯುತ್ತಿದ್ದವರು ಎಂದು ತಿಳಿದು ಬಂದಿದೆ. ಮಾಹಿತಿಗಳ ಪ್ರಕಾರ ಕೊಲೆಯಾದ ಸೈಫುದ್ದೀನ್ ಅತ್ರಾಡಿ ರೌಡಿಶೀಟರ್ ಕೂಡ ಆಗಿದ್ದು, ಸುಮಾರು 30—35 ಬಸ್ ಗಳ ಮಾಲಿಕರಾಗಿದ್ದರು. ಇದಲ್ಲದೇ ಮುಂಬೈನಲ್ಲಿಯೂ ಹೊಟೇಲ್ ಉದ್ಯಮವನ್ನು ನಡೆಸುತ್ತಿದ್ದರು ಎಂದು ಹೇಳಲಾಗಿದೆ.
ಸ್ಕೇಹಿತರಿಂದಲೇ ಹತ್ಯೆ:
ಶನಿವಾರ ಬೆಳಗ್ಗೆ ಫೈಝಲ್ ಖಾನ್ ಎಂಬಾತ ಸೈಫುದ್ದೀನ್ ಅವರ ಮಣಿಪಾಲದ ಮನೆಗೆ ಬಂದು ಬಸ್ ನ ವ್ಯವಹಾರದ ಬಗ್ಗೆ ಮಾತನಾಡಲು ಮಂಗಳೂರಿಗೆ ಹೋಗಲಿಕ್ಕಿದೆ ಎಂದಿದ್ದ. ಹೀಗಾಗಿ ಸೈಫ್ ಕಾರಿನಲ್ಲಿ ಆತನೊಂದಿಗೆ ತೆರಳಿದ್ದರು. ದಾರಿ ಮಧ್ಯೆ ಇವರ ಕಾರಿನಲ್ಲಿ ಶರೀಫ್ ಹಾಗೂ ಇತರರು ಸೇರಿಕೊಂಡಿದ್ದರು ಎಂದು ಹೇಳಲಾಗಿದೆ. ಈ ವೇಳೆ ಮಂಗಳೂರಿಗೆ ಹೋಗುವ ಬದಲು ಕೊಡವೂರಿನಲ್ಲಿರುವ ಸೈಫ್ ಮನೆಗೆ ತೆರಳಿದ್ದು, ಅಲ್ಲಿ ಮನೆಯ ಬಾಗಿಲು ತೆರೆದು ಸೈಫ್ ಒಳಗೆ ಹೋಗುತ್ತಿದ್ದಂತೆಯೇ ಆರೋಪಿಗಳು ತಲವಾರು ಮತ್ತು ಚೂರಿಯಿಂದ ಮನಸೋ ಇಚ್ಛೆ ದಾಳಿ ನಡೆಸಿ ಹತ್ಯೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
3 ತಂಡ ರಚಿಸಿ ತನಿಖೆ:
ಸದ್ಯ ಸೈಫುದ್ದೀನ್ ಹತ್ಯೆ ಪ್ರಕರಣದ ತನಿಖೆಗಾಗಿ ಮೂರು ತಂಡಗಳನ್ನು ರಚಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಸೈಫುದ್ದೀನ್ ನ ಬಸ್ ನ ಚಾಲಕರಾಗಿ ದುಡಿಯುತ್ತಿದ್ದ ಮೂವರು ಕೃತ್ಯ ನಡೆಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಹೇಳಿದ್ದರು. ಸದ್ಯ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD