6:34 PM Saturday 31 - January 2026

ಅಕ್ರಮ ಮದ್ಯ ತಡೆಗೆ ಮಹಿಳೆಯರಿಂದ ಪತ್ರ ಚಳುವಳಿ

15/02/2021

ರಾಯಚೂರು: ಬಡವರ ಪಾಲಿಗೆ ನರಕವಾಗಿರುವ “ಮದ್ಯ”ದ ವಿರುದ್ಧ ಮಹಿಳೆಯರು ಪತ್ರ ಚಳುವಳಿ ನಡೆಸಿದ್ದು,  ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಈ ಪತ್ರ ಚಳವಳಿ ನಡೆಯಿತು.

ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ಹೈಕೋರ್ಟ್‌ ಆದೇಶ ಅನುಷ್ಠಾನಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ,  ಜಿಲ್ಲಾ ಕ್ರೀಡಾಂಗಣದಿಂದ ನಗರಸಭೆ ಪಕ್ಕದ ಕೇಂದ್ರ ಅಂಚೆಕಚೇರಿವವರೆಗೂ ಮೆರವಣಿಗೆ ನಡೆಸಿ, ಬೇಡಿಕೆಗಳನ್ನು ಒಳಗೊಂಡ ಪತ್ರಗಳನ್ನು ಸರದಿಯಲ್ಲಿ ಅಂಚೆ ಪೆಟ್ಟಿಗೆಗೆ ಮಹಿಳೆಯರು ಹಾಕಿದರು.

‘ಅಕ್ರಮ ಮದ್ಯದ ವಿರುದ್ಧ ರಾಯಚೂರಿನಲ್ಲಿ ನಡೆಯುವ ಹೋರಾಟ ಐತಿಹಾಸಿಕ. ಈ ಹಿಂದೆಯೂ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಧರಣಿ ಮಾಡಿದ್ದರು. ಈಗಲೂ ರಾಜ್ಯ ಸರ್ಕಾರ ಮಾತುಕತೆಗೆ ಆಹ್ವಾನಿಸದಿದ್ದರೆ, ರಾಜ್ಯದೆಲ್ಲೆಡೆಯಿಂದ ಮಹಿಳೆಯರು ರಾಯಚೂರಿನಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಪಾಲ್ಗೊಂಡು ಬೃಹತ್ ಹೋರಾಟ ನಡೆಸಲಿದ್ದಾರೆ ಎಂದು ವಿದ್ಯಾ ಪಾಟೀಲ್ ಹೇಳಿದರು.

ರಾಜ್ಯದ 11 ಜಿಲ್ಲೆಗಳ ಯಾವ ಗ್ರಾಮಗಳಲ್ಲಿ ಅಕ್ರಮ ಮದ್ಯೆ ಮಾರಾಟ ನಡೆಯುತ್ತಿದೆ. ಯಾರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಆಯಾ ಜಿಲ್ಲಾಡಳಿತಗಳಿಗೆ ಒದಗಿಸಲಾಗಿದೆ. ಅದರಂತೆ ಕೂಡಲೇ ಕಾರ್ಯಕ್ರಪವೃತ್ತರಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಇತ್ತೀಚಿನ ಸುದ್ದಿ

Exit mobile version