5:58 AM Wednesday 27 - August 2025

ಅಮಿತ್ ಶಾ ಚಪ್ಪಲಿ ಕೈಯಲ್ಲಿ ಹಿಡಿದು ತಂದ ತೆಲಂಗಾಣ ಬಿಜೆಪಿ ಮುಖ್ಯಸ್ಥ: ಗುಜರಾತ್ ಗುಲಾಮಗಿರಿ ಎಂದ  ಟಿಆರ್ ಎಸ್

amith shah
22/08/2022

ಕೇಂದ್ರ ಗೃಹ ಸಚಿವ ಅಮಿತ್ ಶಾ  ಅವರು ಸಿಕಂದರಾಬಾದ್‌ ನ ಉಜ್ಜೈನಿ ಮಹಾಕಾಳಿ ಮಠ ದೇವಸ್ಥಾನಕ್ಕೆ ಭೇಟಿ ನೀಡಿ ತೆರಳುತ್ತಿದ್ದ ಸಂದರ್ಭದಲ್ಲಿ  ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಅಮಿತ್ ಶಾ ಅವರ ಚಪ್ಪಲಿಯನ್ನು ಕೈಯಲ್ಲಿ ಹಿಡಿದು ತಂದ ವಿಡಿಯೋ ವೈರಲ್ ಆಗಿದ್ದು, ವಿಪಕ್ಷಗಳು  ತೀವ್ರವಾಗಿ ತರಾಟೆಗೆತ್ತಿಕೊಂಡಿದೆ.

ಘಟನೆ ಸಂಬಂಧ ಬಿಜೆಪಿ ವಿರುದ್ಧ ಟಿಆರ್‌ ಎಸ್ ತೀವ್ರ ದಾಳಿ ನಡೆಸಿದ್ದು,  ರಾಜ್ಯದ ಜನರು ಇಂದು ಗುಜರಾತ್ ನ ಗುಲಾಮರನ್ನು ನೋಡುತ್ತಿದ್ದೇವೆ.  ಬಿಜೆಪಿ ಮುಖ್ಯಸ್ಥರ ಗುಲಾಮಗಿರಿ ಅತ್ಯುತ್ತಮವಾಗಿದೆ ಎಂದು ಟ್ವೀಟ್ ಮೂಲಕ ಟಿಆರ್ ಎಸ್ ಕಾಲೆಳೆದಿದೆ.

ರಾಜ್ಯದ ಜನರು ಗುಜರಾತ್ ನ ಗುಲಾಮರನ್ನು ನೋಡುತ್ತಿದ್ದಾರೆ. ತೆಲಂಗಾಣದ ಸ್ವಾಭಿಮಾನವನ್ನು ಅವಹೇಳನ ಮಾಡಬಾರದು ಎಂದು ಟಿಆರ್ ಎಸ್ ಮುಖಂಡರು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದಾರೆ.

ನಲ್ಗೊಂಡ ಜಿಲ್ಲೆಯ ಮುನುಗೋಡು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಶಾ ಅವರ ತೆಲಂಗಾಣ ಪ್ರವಾಸ ಬಂದಿದ್ದರು.  ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಮಿತ್ ಶಾ, ಕೆಸಿಆರ್ ಸರ್ಕಾರ ರೈತರ ವಿರೋಧಿಯಾಗಿದೆ, ಜನರ ನಂಬಿಕೆಗೆ ದ್ರೋಹ ಮಾಡಿದೆ. ಕೆಸಿಆರ್ ಸರ್ಕಾರದ ಬೇರುಸಹಿತ ಕಿತ್ತುಹಾಕುವ ಪ್ರಾರಂಭವಾಗಿದೆ ಎಂದು ಹೇಳಿಕೆ ನೀಡಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version