ದೃಷ್ಟಿ ಇಲ್ಲದಿದ್ದರೂ ಕುರ್ ಆನ್ ಓದುವ ಹಿರಿಯ ವ್ಯಕ್ತಿ!

asida
25/03/2024

ಬೆಂಗಳೂರು: ಮುಸ್ಲಿಮರ ಪವಿತ್ರ ರಂಜಾನ್ ಮಾಸದಲ್ಲಿ ಉಪವಾಸವನ್ನು ಬಹಳ ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಹೋಗಲಾಗುತ್ತಿದೆ. ಇದೇ ಸಂದರ್ಭದಲ್ಲಿ ಅಝೀಜ್ ತಸಾದುಖ್ ಹುಸೈನ್ ಎಂಬ ಹಿರಿಯ ವ್ಯಕ್ತಿಯೊಬ್ಬರು ಇದೀಗ ಸುದ್ದಿಯಲ್ಲಿದ್ದಾರೆ.

ಹೌದು..! ಇವರು ಹುಟ್ಟುತ್ತಲೇ ದೃಷ್ಟಿಯನ್ನ ಕಳೆದುಕೊಂಡವರು. ದೃಷ್ಟಿಕಳೆದುಕೊಂಡರೂ ಇವರು ಈ ಹಿರಿಯ ವಯಸ್ಸಿನಲ್ಲಿ ಕೂಡ ಬ್ರೈಲ್ ಲಿಪಿಯ ಮೂಲಕ ಕುರ್ ಆನ್ ಬಳಸಿಕೊಂಡು ಸೂಕ್ತಗಳನ್ನು ಓದುತ್ತಾರೆ.

ಇದೀಗ ರಂಜಾನ್ ತಿಂಗಳಾಗಿರುವುದರಿಂದ ಇವರು ಕುರ್ ಆನ್ ಸಂದೇಶಗಳನ್ನು ಹೆಚ್ಚು ಹೆಚ್ಚು ಪಠಿಸುತ್ತಿದ್ದಾರೆ. ಇವರು ಮೂಲತಃ ಹೈದರಾಬಾದ್ ನವರಾಗಿದ್ದಾರೆ. ಸದ್ಯ ಪತ್ನಿ ಹಾಗೂ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಕೇವಲ ಧಾರ್ಮಿಕ ಮಾತ್ರವಲ್ಲದೇ ಶಿಕ್ಷಣ ಕ್ಷೇತ್ರದಲ್ಲೂ ಇವರು ಸಾಧನೆ ಮಾಡಿದ್ದಾರೆ. ಹೈದರಾಬಾದ್ ನ ಒಸ್ಮಾನಿಯಾ ವಿವಿಯಲ್ಲಿ ಎಂಎ, ಬಿಎಡ್ ಪದವಿಯನ್ನು ಪೂರೈಸಿ, ಶಿಕ್ಷಕ ವೃತ್ತಿ ಆರಂಭಿಸಿದ ಇವರು ನಿವೃತ್ತಿಯ ಸಮಯಕ್ಕೆ ಕಾಲೇಜೊಂದರ ಹಿರಿಯ ಉಪನ್ಯಾಸಕನಾಗಿದ್ದರು.

ಅಝೀಝ್ ತಸಾದುಖ್ ಅವರಿಗೆ ನಿವೃತ್ತಿಯ ನಂತರ ಕುರ್ ಆನ್ ಅಧ್ಯಯನ ನಡೆಸುವ ಕುರಿತು ಹೆಚ್ಚಿನ ಆಸಕ್ತಿ ಮೂಡಿತ್ತಂತೆ, ಹೀಗಾಗಿ ಅವರ ಸಂಬಂಧಿಕರು ಪಾಕಿಸ್ತಾನದಿಂದ ಬ್ರೈಲ್ ಲಿಪಿಯ ಕುರ್ ಆನ್ ತರಿಸಿ ಒದಗಿಸಿದ್ದಾರೆ. ಇದರಿಂದ ಅಝೀಝ್ ತಸಾದುಖ್ ಖುಷಿ ವ್ಯಕ್ತಪಡಿಸಿದ್ದಾರೆ, ಕುರ್ ಆನ್ ಅಧ್ಯಯನ ಅವರ ಜೀವನದಲ್ಲಿ ಇನ್ನಷ್ಟು ಹುರುಪು ತಂದಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version