12:32 AM Saturday 18 - October 2025

ಸಂಸದ ಅನಂತ್ ಕುಮಾರ್ ಹೆಗಡೆ ಸತ್ತರೇನು? ಬದುಕಿದರೇನು? | ಮಾಜಿ ಸಚಿವನ ಹೇಳಿಕೆ

ananth kumar asnotikar
06/04/2021

ಕಾರವಾರ: ಸಂಸದ ಅನಂತ್ ಕುಮಾರ್ ಹೆಗಡೆ ಸತ್ತರೇನು? ಬದುಕಿದರೇನು? ಏನೂ ಲೆಕ್ಕಕ್ಕಿಲ್ಲ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವನಿನ್ನು ಐದು ವರ್ಷ ಜನರ ಕಣ್ಣಿಗೆ ಕಾಣ ಸಿಗುವುದಿಲ್ಲ ಎಂದು ಹೇಳಿರುವ ಬಗ್ಗೆ ವರದಿಯಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಎಲ್ಲಾದರೂ ಹಿಂದು- ಮುಸ್ಲಿಂ ಗಲಾಟೆ ಆಗಬೇಕು. ಯಾರಾದರೂ ಹಿಂದು ಸಾಯ್ಬೇಕು. ಯಾರಾದರೂ ಮೀನುಗಾರ ಯುವಕ ಸಾಯ್ಬೇಕು, ಅಂಥ ಪ್ರಸಂಗದಲ್ಲಿ ಮಾತ್ರ ಅವನನ್ನು ಕಾಣಬಹುದು‌. ಹಾಗಾಗಿ ಅವನು ಸತ್ರೇನು, ಬದುಕಿದ್ರೇನು? ಎಂದು ಪ್ರಶ್ನಿಸಿದ್ದಾರೆ.

ಅನಂತ್ ಕುಮಾರ್ ಹೆಗಡೆ ನೀಡಿರುವ ಕೋಮುಪ್ರೇರಿತ ಹೇಳಿಕೆಯಿಂದ ಎಲ್ಲರಿಗೂ ನೋವಾಗಿದೆ ನಿಜ. ಆದರೆ ಅನಾರೋಗ್ಯದಂತಹ ಸ್ಥಿತಿಯಲ್ಲಿ ಈ ರೀತಿಯ ಹೇಳಿಕೆ ಸರಿಯಲ್ಲ. ಅನಂತ್ ಕುಮಾರ್ ಮಾಡಿರುವುದನ್ನೇ ಅವರಿಗೂ ಜನರು ಮಾಡಿದರೆ, ಅವರ ಮನಸ್ಥಿತಿಗೂ ಜನರ ಮನಸ್ಥಿತಿಗು ಏನು ವ್ಯತ್ಯಾಸ ಇರುತ್ತದೆ ಎಂದು ಕೋಮುವಾದ, ಮನುವಾದ ವಿರೋಧಿಗಳು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಅಸ್ನೋಟಿಕರ್ ಹೇಳಿಕೆಯನ್ನು ಖಂಡಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version