10:07 PM Thursday 11 - December 2025

ಬಾಲ್ಯವಿವಾಹದ ಕಪಿಮುಷ್ಠಿಯಿಂದ ಪಾರಾದ ಬಾಲಕಿ ಬಿಐಇ ಪರೀಕ್ಷೆಯಲ್ಲಿ ಟಾಪರ್

13/04/2024

ಬಾಲ್ಯ ವಿವಾಹದ ಕಪಿಮುಷ್ಠಿಯಿಂದ ಪಾರಾದ ಆಂಧ್ರಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಮೊದಲ ವರ್ಷದ ಇಂಟರ್ಮಿಡಿಯೇಟ್ ಬೋರ್ಡ್ ಪರೀಕ್ಷೆ ಅಥವಾ ಬಿಐಇ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.

ಕರ್ನೂಲ್ ಜಿಲ್ಲೆಯ ಜಿ ನಿರ್ಮಲ ಎಂಬ ವಿದ್ಯಾರ್ಥಿನಿಗೆ ಕುಟುಂಬ ಸದಸ್ಯರು ಬಲವಂತವಾಗಿ ಬಾಲ್ಯ ವಿವಾಹಕ್ಕೆ ಸಿದ್ಧತೆ ನಡೆಸಿದ್ದರು.. ಮಾಹಿತಿ ಪಡೆದ ಜಿಲ್ಲಾಡಳಿತ ಬಾಲಕಿಯನ್ನು ರಕ್ಷಿಸಿದ್ದು ಬಳಿಕ ಈ ವಿದ್ಯಾರ್ಥಿನಿ ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ಇಂಟರ್ಮೀಡಿಯಟ್ ಬೋರ್ಡ್ ಪರೀಕ್ಷೆಯಲ್ಲಿ 440ಕ್ಕೆ 421 ಅಂಕಗಳಿಸಿ ಅಗ್ರಸ್ಥಾನ ಪಡೆದಿದ್ದಾಳೆ ಎಂದು ಬೋರ್ಡ್ ಕಾರ್ಯದರ್ಶಿ ಸೌರಭ ಗೌರ ತಿಳಿಸಿದ್ದಾರೆ.

ನಿರ್ಮಲ ಅವರು ಐಪಿಎಸ್ ಅಧಿಕಾರಿಯಾಗಬೇಕು ಎಂಬ ಕನಸು ಹೊಂದಿದ್ದಾರೆ. ಅಲ್ಲದೇ ಬಾಲ್ಯ ವಿವಾಹ ತಡೆಯುವುದು ಹೆಣ್ಮಕ್ಕಳು ಶಿಕ್ಷಣ ಮುಂದುವರಿಸುವಂತೆ ಪ್ರೇರೇಪಿಸುವುದು ಈಕೆಯ ಗುರಿಯಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version