9 ತಿಂಗಳಿನಿಂದ ಯುವತಿಯನ್ನು ಅಕ್ರಮವಾಗಿ ಬಚ್ಚಿಟ್ಟಿದ್ದ: ಕೊನೆಗೂ ಸಿಕ್ಕಿಬಿಟ್ಟ ಆರೋಪಿ

05/07/2024

ಜಮ್ಮುವಿನಲ್ಲಿ ಒಂಬತ್ತು ತಿಂಗಳಿನಿಂದ ಕಾಣೆಯಾಗಿದ್ದ 22 ವರ್ಷದ ತೇಜಸ್ವಿನಿ ಎಂಬ ಮಹಿಳೆಯನ್ನು ಆಂಧ್ರಪ್ರದೇಶ ಪೊಲೀಸರು ರಕ್ಷಿಸಿದ್ದಾರೆ. ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಗಿದೆ.

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮಚಾವರಂನ ವಿದ್ಯಾರ್ಥಿನಿ ತೇಜಸ್ವಿನಿ 2023 ರ ಅಕ್ಟೋಬರ್ 28 ರಂದು ನಾಪತ್ತೆಯಾಗಿದ್ದರು.

ನಂತರ ಆಕೆಯ ಪೋಷಕರು ನಾಪತ್ತೆಯಾದ ದೂರು ದಾಖಲಿಸಿದ್ದರು. ಆದರೆ ಈ ಪ್ರಕರಣದಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಜೂನ್ 22 ರಂದು ತೇಜಸ್ವಿನಿ ತಾಯಿ ಶಿವಕುಮಾರ್ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಸಹಾಯವನ್ನು ಕೋರಿದ್ದರು.
ತೇಜಸ್ವಿನಿಯನ್ನು ಹುಡುಕಲು ವಿಶೇಷ ತಂಡವನ್ನು ರಚಿಸುವಂತೆ ಪವನ್ ಕಲ್ಯಾಣ್ ಪೊಲೀಸರಿಗೆ ಸೂಚನೆ ನೀಡಿದ್ದರು.

ಅಮ್ಜದ್ ಎಂಬಾತ ಮೊದಲು ಸಂತ್ರಸ್ತೆಯನ್ನು ಹೈದರಾಬಾದ್ ಗೆ ಕರೆದೊಯ್ದಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಹಣಕಾಸಿನ ತೊಂದರೆಯಿಂದಾಗಿ ಈತ ತನ್ನ ಮೊಬೈಲ್ ಮತ್ತು ತೇಜಸ್ವಿನಿ ಅವರ ಚಿನ್ನದ ಆಭರಣಗಳನ್ನು ಮಾರಾಟ ಮಾಡಿದ್ದರು. ಅವರು ಜಮ್ಮುವನ್ನು ತಲುಪುವ ಮೊದಲು ಕೇರಳ, ಮುಂಬೈ ಮತ್ತು ದೆಹಲಿ ಮೂಲಕ ತೆರಳಿದರು.

ಜಮ್ಮುವಿನಲ್ಲಿ ಅಮ್ಜದ್ ಗೆ ಹೋಟೆಲ್ ನಲ್ಲಿ ಕೆಲಸ ಸಿಕ್ಕರೂ ತೇಜಸ್ವಿನಿಗೆ ಮೊಬೈಲ್ ಹಿಡಿಯಲು ಅವಕಾಶ ನೀಡಲಿಲ್ಲ. ಅಮ್ಜದ್ ಇಲ್ಲದಿದ್ದಾಗ ತೇಜಸ್ವಿನಿ ತನ್ನ ಅಕ್ಕನಿಗೆ ಇನ್ಸ್ಟಾಗ್ರಾಮ್ ಸಂದೇಶ ಕಳುಹಿಸಿದ್ದಳು. ಈ ಸುಳಿವು ಪೊಲೀಸರಿಗೆ ಸಹಾಯ ಮಾಡಿತು‌. ಅವರು ಜಮ್ಮು ಪೊಲೀಸರೊಂದಿಗೆ ಸಮನ್ವಯ ಸಾಧಿಸಿದರು.
ಜಮ್ಮು ಪೊಲೀಸರು ತೇಜಸ್ವಿನಿ ಮತ್ತು ಅಮ್ಜದ್ ಇಬ್ಬರನ್ನೂ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಅಮ್ಜದ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 366 (ಅಪಹರಣ) ಮತ್ತು 344 (ಅಕ್ರಮ ಬಂಧನ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ತೇಜಸ್ವಿನಿಯನ್ನು ಆಕೆಯ ಪೋಷಕರಿಗೆ ಒಪ್ಪಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version