ಮಗುವಿನ ಭವಿಷ್ಯ ಬರೆಯಬೇಕಾದ ಪೆನ್ನು ಜೀವವನ್ನೇ ಬಲಿ ಪಡೆಯಿತು!

reyanshika
05/07/2024

ತೆಲಂಗಾಣ: ಪೆನ್ನು ಚುಚ್ಚಿದ ಪರಿಣಾಮ ನಾಲ್ಕು ವರ್ಷದ ಬಾಲಕಿ ಮೃತಪಟ್ಟ ಘಟನೆ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಭದ್ರಾಚಲಂನಲ್ಲಿ ನಡೆದಿದೆ.

ರಿಯಾನ್ಸಿಕಾ ಮೃತ ಬಾಲಕಿಯಾಗಿದ್ದು ಬೆಡ್ ಮೇಲೆ ಆಟವಾಡುತ್ತಿದ್ದಾಗ ಬಾಲಕಿ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಕೈಯಲ್ಲಿದ್ದ ಪೆನ್ನು ರಭಸವಾಗಿ ಬಾಲಕಿಯ ಕಿವಿಯ ಮೇಲ್ಭಾಗಕ್ಕೆ ನುಗ್ಗಿತ್ತು. ಪರಿಣಾಮವಾಗಿ ತೀವ್ರ ರಕ್ತಸ್ರಾವಗೊಂಡಿತ್ತು. ತಕ್ಷಣವೇ ಖಮ್ಮಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ನಾಲ್ಕು ಇಂಚು ಒಳಹೊಕ್ಕಿದ್ದ ಪೆನ್ನನ್ನು ಹೊರತೆಗೆದರು. ಆದರೆ, ಶಸ್ತ್ರಚಿಕಿತ್ಸೆಯ ನಂತರ ಮೆದುಳಿನ ಸೋಂಕಿನಿಂದ ರೆಯಾನ್ಶಿಕಾ ಸಾವನ್ನಪ್ಪಿದ್ದಾರೆ.
ಮಗುವಿನ ಭವಿಷ್ಯ ಬರೆಯಬೇಕಾದ ಪೆನ್ನು ಜೀವವನ್ನೇ ಬಲಿ ಪಡೆದುಕೊಂಡಿದೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version