4:22 PM Saturday 31 - January 2026

ಗರ್ಲ್ ಫ್ರೆಂಡ್ ಮೇಲಿನ ಕೋಪದಿಂದ ರೈಲ್ವೇ ಸಿಗ್ನಲ್ ಬಾಕ್ಸ್ ಒಡೆದು ಹಾಕಿದ ವ್ಯಕ್ತಿ: ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

railway
07/06/2023

ಒಡಿಶಾದಲ್ಲಿ ರೈಲು ದುರಂತ ಜನರ ಕಣ್ಣು ಮುಂದೆ ಇರುವಾಗಲೇ ತಮಿಳುನಾಡಿನಲ್ಲೊಂದು ಘಟನೆ ಸಂಭವಿಸಿದ್ದು, ರೈಲ್ವೇ ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ನಡೆಯಬಹುದಾಗಿದ್ದ ಭಾರೀ ಅಪಾಯ ತಪ್ಪಿದಂತಾಗಿದೆ.

ಹೌದು…! ವ್ಯಕ್ತಿಯೋರ್ವ ತನ್ನ ಗರ್ಲ್ ಫ್ರೆಂಡ್ ಜೊತೆಗೆ ಜಗಳವಾಡಿದ್ದು, ಆಕೆಯ ಮೇಲಿನ ಕೋಪದಿಂದ ರೈಲ್ವೇ ಸಿಗ್ನಲ್ ಬಾಕ್ಸ್ ನ್ನು ಒಡೆದು ಹಾಕಿದ್ದಾನೆ.

ಮಂಗಳವಾರ ರೈಲ್ವೇ ಅಧಿಕಾರಿಗಳು ತಿರುಪತ್ತೂರಿನಲ್ಲಿ ರೈಲು ಹಳಿಗಳನ್ನು ಪರಿಶೀಲನೆ ನಡೆಸಿದಾಗ ಸಿಗ್ನಲ್ ಬಾಕ್ಸ್ ಒಡೆದು ಹಾಕಿರುವುದು ಕಂಡು ಬಂದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು, ಸುತ್ತ ಪರಿಶೀಲಿಸಿದಾಗ ಮದ್ಯದ ಮತ್ತಿನಲ್ಲಿರುವ ಗೋಕುಲ್ ಎಂಬ ವ್ಯಕ್ತಿ ಪತ್ತೆಯಾಗಿದ್ದಾನೆ.

ಆರ್ ಪಿಎಫ್ ಮತ್ತು ಸರ್ಕಾರಿ ರೈಲ್ವೇ ಪೊಲೀಸ್ ನ ಹಿರಿಯ ಅಧಿಕಾರಿಗಳು ಗೋಕುಲ್ ನನ್ನು ವಿಚಾರಣೆ ನಡೆಸಿದ್ದು, ಈ ವೇಳೆ ಆರಂಭದಲ್ಲಿ ಬಾಕ್ಸ್ ಗೆ ಹಾನಿ ಮಾಡಿರುವುದನ್ನು ನಿರಾಕರಿಸಿದ್ದ. ಆ ಬಳಿಕ ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಿಸಿದಾಗ ಗರ್ಲ್ ಫ್ರೆಂಡ್ ಜೊತೆಗೆ ಜಗಳವಾಡಿ ಕೋಪದಿಂದ ಸಿಗ್ನಲ್ ಬಾಕ್ಸ್ ಒಡೆದು ಹಾಕಿರುವುದಾಗಿ ಹೇಳಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

 

ಇತ್ತೀಚಿನ ಸುದ್ದಿ

Exit mobile version