10:19 AM Saturday 23 - August 2025

ನಟ ದರ್ಶನ್‌ ಬಗ್ಗೆ ಮತ್ತೊಂದು ಶಾಕಿಂಗ್‌ ನ್ಯೂಸ್!: ಇದೆಂಥಾ ಅಮಾನವೀಯತೆ!

darshan
13/06/2024

ಚಾಮರಾಜನಗರ:  ರೇಣುಕಾಸ್ವಾಮಿ ಎಂಬ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಕಸ್ಟಡಿಯಲ್ಲಿರುವ ನಟ ದರ್ಶನ್‌ ವಿರುದ್ಧ ಮತ್ತೊಂದು ಗಂಭೀರವಾದ ಆರೋಪ ಕೇಳಿ ಬಂದಿದೆ.

ನಟ ದರ್ಶನ್‌ ಅವರ ತೂಗುದೀಪ ಫಾರಂ ಹೌಸ್‌ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಎತ್ತುವೊಂದು ತಿವಿದಿತ್ತು. ಆಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮನೆಗೆ ಬಿಟ್ಟು ಬಂದಿದ್ದ ನಟ ನಂತರ ಆ ಕಡೆಗೆ ತಿರುಗಿಯೂ ನೋಡಿಲ್ಲ ಎನ್ನಲಾಗಿದೆ.

ಚಾಮರಾಜನಗರ ತಾಲೂಕಿನ ನಿಜಲಿಂಗನಪುರದ ಮಹೇಶ್ ಗೆ ದರ್ಶನ್‌ ಅವರ ಎತ್ತು ತಿವಿದ ಪರಿಣಾಮ ಎತ್ತಿನ ಕೊಂಬು ಕಣ್ಣಿನಲ್ಲಿ ತೂರಿ ತಲೆ ಬುರುಡೆಯಿಂದ ಹೊರಕ್ಕೆ ಬಂದಿತ್ತು. ಆಸ್ಪತ್ರೆಗೆ ದಾಖಲಿಸಿ, ಮನೆಗೆ ಬಿಟ್ಟ ಬಳಿಕ ದರ್ಶನ್‌ ಆ ಕಡೆಗೆ ತಿರುಗಿ ನೋಡಿಲ್ವಂತೆ!

ಅಲ್ಲದೇ, ಮಹೇಶ್‌ ಅವರ ತಾಯಿ ದರ್ಶನ್‌ ಬಳಿ ಸಹಾಯ ಕೇಳಲು ಹೋದ ವೇಳೆ ನಾಯಿ ಛೂ ಬಿಟ್ಟು ವಿಕೃತಿ ಮೆರೆದಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.

ಪರಿಹಾರ ನೀಡುವ ಹೆಸರಿನಲ್ಲಿ ಮೈಸೂರಿನ ಖಾಸಗಿ ಹೊಟೇಲ್‌ ಗೆ ಕರೆಸಿ, ರೌಡಿಗಳಿಂದ ಬೆದರಿಕೆ ಹಾಕಿಸಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.

ಮಹೇಶ್‌ ಅವರ ಜೀವನ ಇದೀಗ ದುಸ್ತರವಾಗಿದೆ. ಅವರಿಂದ ದುಡಿಯಲು ಸಾಧ್ಯವಾಗದ ಸ್ಥಿತಿಯಿದೆ. ತಾಯಿ, ಪತ್ನಿ ಕೂಲಿ ಮಾಡಿ ಕುಟುಂಬವನ್ನು ಸಾಗಿಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಮಹೇಶ್‌ ಹಾಸಿಗೆ ಹಿಡಿದಿದ್ದಾರೆ. ಜೀವನ ನರಕಮಯವಾಗಿದೆ ಎಂದು ಮಾಧ್ಯಮವೊಂದಕ್ಕೆ ಮಹೇಶ್‌ ಹಾಗೂ ಕುಟುಂಬಸ್ಥರು ಪ್ರತಿಕ್ರಿಯೆ ನೀಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version