11:19 AM Wednesday 20 - August 2025

ಭೀಕರ ಅಪಘಾತ | ನಿರೂಪಕಿ ಸೇರಿದಂತೆ ಮೂವರು ದಾರುಣ ಸಾವು

08/02/2021

ಜೈಪುರ:  ಟ್ರಕ್ ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ನಿರೂಪಕಿ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಚಿತ್ತೋಡಗಢ ಜಿಲ್ಲೆಯ ಗಂಗಾನಗರದ ಬಳಿಯಲ್ಲಿ ನಡೆದಿದ್ದು, ಮೃತರೆಲ್ಲರೂ 22ರಿಂದ 25 ವರ್ಷದೊಳಗಿನವರಾಗಿದ್ದಾರೆ.

ವೀರೇಂದ್ರ, ಆಶೀಷ್ ಮತ್ತು ಶಹಜಾದ್ ಉರ್ಫ್ ಖುಷ್ಬೂ ಮೃತಪಟ್ಟವರಾಗಿದ್ದಾರೆ. ಶಹಜಾದ್ ಉರ್ಫ್ ಖುಷ್ಬೂ ಖಾಸಗಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿಕೊಂಡಿದ್ದು, ಬೈಕ್ ಸವಾರ ವೀರೇಂದ್ರ ಡಿಜೆ ಸೌಂಡಿಂಗ್ ಮಾಡುತ್ತಿದ್ದರು. ಇನ್ನೋರ್ವ ವೀರೇಂದ್ರ ಗೆಳೆಯನಾಗಿದ್ದು, ಮೂವರು ಚಿತ್ತೋಡಗಢಗೆ ತೆರಳುತ್ತಿದ್ದರು.

ಟ್ರೇಲರ್ ಗೆ ಬೈಕ್ ಡಿಕ್ಕಿಯಾದ ಪರಿಣಾಮ ವೀರೇಂದ್ರ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಶಹಜಾದ್ ಮತ್ತು ಆಶೀಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗಂಗಾನಗರದ ಚತುಷ್ಪಥ ಹೆದ್ದಾರಿಯಲ್ಲಿ ಈ ಭೀಕರ ಘಟನೆ ನಡೆದಿದೆ. ಮೃತಪಟ್ಟ ಮೂವರು ಕೂಡ ಬಿಲ್ವಾಡದ ನಿವಾಸಿಗಳಾಗಿದ್ದಾರೆ.

ಇತ್ತೀಚಿನ ಸುದ್ದಿ

Exit mobile version