12:40 AM Saturday 31 - January 2026

ಬಸ್-ಜೀಪು ನಡುವೆ ಅಪಘಾತ: ವೃದ್ಧೆ ದಾರುಣ ಸಾವು

accident
07/04/2021

ಮಡಿಕೇರಿ: ಖಾಸಗಿ ಬಸ್ ಹಾಗೂ ಜೀಪ್ ನಡುವೆ ನಡೆದ ಅಪಘಾತದಲ್ಲಿ ವೃದ್ಧೆಯೊಬ್ಬರು  ದಾರುಣವಾಗಿ  ಸಾವನ್ನಪ್ಪಿದ  ಘಟನೆ ಮಡಿಕೇರಿ- ವಿರಾಜಪೇಟೆ ರಸ್ತೆಯ ಬೇತ್ರಿ ಬಳಿ ನಡೆದಿದೆ.

ದಿವಂಗತ ಮುಕ್ಕಾಟಿ ಪೂವಯ್ಯ ಎಂಬವರ ಪತ್ನಿ 70 ವರ್ಷ ವಯಸ್ಸಿನ ಲಕ್ಷ್ಮೀ ಅಪಘಾತದಲ್ಲಿ ಮೃತಪಟ್ಟವರಾಗಿದ್ದಾರೆ.  ಇನ್ನೂ ಘಟನೆಯಲ್ಲಿ ನಿವೃತ್ತ ಯೋಧ ಮೋಹನ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವೀರಾಜಪೇಟೆಯಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಬಸ್ ಹಾಗೂ ಮಡಿಕೇರಿಯಿಂದ ವೀರಾಜಪೇಟೆ ಕಡೆಗೆ ತೆರಳುತ್ತಿದ್ದ ಜೀಪು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ವಿದ್ಯುತ್ ಕಂಬವೊಂದು ಮುರಿದು ಬಿದ್ದಿದೆ.

ಇತ್ತೀಚಿನ ಸುದ್ದಿ

Exit mobile version