12:48 PM Wednesday 21 - January 2026

ಮೂಡುಬಿದಿರೆ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ ಬೆದರಿಕೆ | ತಾಸೆ ವಾದಕನ ಬಂಧನ

21/11/2020

ಮೂಡುಬಿದಿರೆ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಆರೋಪಿಯೋರ್ವನನ್ನು ಮಂಗಳೂರಿನ ಮಹಿಳಾ ಪೊಲೀಸರು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಮೂಡುಬಿದಿರೆಯ ಕಲ್ಲಮುಂಡ್ಕೂರಿನ ತಾಸೆ ವಾದಕ ಸತೀಶ್ ಅಂಚನ್  ಬಂಧಿತ ಆರೋಪಿಯಾಗಿದ್ದಾನೆ. ಜುಲೈ ತಿಂಗಳಲ್ಲಿ ಅಪ್ರಾಪ್ತೆಯು ಕಲ್ಲಮುಂಡ್ಕೂರು ಎಂಬಲ್ಲಿ ನಡೆದುಕೊಂಡು ಬರುತ್ತಿದ್ದಾಗ ಆರೋಪಿ ಸತೀಶ್, ಆಕೆಯನ್ನು ಬಲವಂತವಾಗಿ ತನ್ನ ರಿಕ್ಷಾದಲ್ಲಿ ಕುಳ್ಳಿರಿಸಿ ಕಲ್ಲು ಕ್ವಾರೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ.

ಅತ್ಯಾಚಾರ ಬಳಿಕ ಬಾಲಕಿಯ ನಗ್ನ ಚಿತ್ರವನ್ನು ತೆಗೆದುಕೊಂಡಿದ್ದ ಆರೋಪಿ, ಬ್ಲ್ಯಾಕ್ ಮೇಲ್ ಆರಂಭಿಸಿದ್ದನೆನ್ನಲಾಗಿದೆ. ಜೊತೆಗೆ ಈ ವಿಚಾರವನ್ನು ಹೊರಗಡೆ ಹೇಳಿದರೆ, ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಕೊಲ್ಲುವುದಾಗಿ ಆತ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಇತ್ತೀಚಿನ ಸುದ್ದಿ

Exit mobile version