ಮನೆಗಳ್ಳತನವನ್ನೇ ವೃತ್ತಿಯನ್ನಾಗಿಸಿರುವ ಹೊರ ರಾಜ್ಯಗಳ ಆರೋಪಿಗಳ ಬಂಧನ!

arrest
10/06/2023

ಈಶಾನ್ಯ ವಿಭಾಗ, ವಿದ್ಯಾರಣ್ಯಪುರ ಪೊಲೀಸ್ ಠಾಣೆ ಮನೆಗಳ್ಳತನ ಮಾಡುವುದನ್ನೇ ವೃತ್ತಿಯಾನ್ನಾಗಿಸಿಕೊಂಡಿದ್ದ ಹೊರ ರಾಜ್ಯದ ಆರೋಪಿಗಳ ಬಂಧನವಾಗಿದ್ದು ಸುಮಾರು 17,70,000/- ರೂ ಬೆಲೆಬಾಳುವ ಒಟ್ಟು 319 ಗಾಂ ಚಿನ್ನಾಭರಣಗಳ ವಶ ಪಡಿಸಿಕೊಳ್ಳಲಾಗಿದೆ.

ಈ ಆರೋಪಿಯಿಂದ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ 07 ಮನೆಗಳ್ಳತನದ ಪ್ರಕರಣಗಳು ದಾಖಲಾಗಿವೆ. ದಿನಾಂಕ 24-12-2022 ರಂದು ಬೆಂಗಳೂರು ನಗರದ ವಿದ್ಯಾರಣ್ಯಪುರ ಪ ಠಾಣಾ ಸರಹದ್ದಿನಲ್ಲಿರುವ …ಬಿಇಎಲ್ ಲೇಔಟ್ನ ನಿವಾಸಿ ಕೆ ಪ್ರಶಾಂತ್ ರವರ ಮ ಬಾಗಿಲ ಬೀಗವನ್ನು ಮುರಿದು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹು ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿತ್ತು.

ಕಳೆದ ಒಂದು ವರ್ಷದಿಂದ ಈಶಾನ್ಯ ವಿಭಾಗದ ವ್ಯಾಪ್ತಿಯ ಬಿಇಎಲ್ ಲೇಔಟ್ನಲ್ಲಿ ಪದೇಪದೇ ಕಳವು ಪ್ರಕರಣಗಳು ದಾಖಲಾಗಿದ್ದರಿಂದ ಈ ಪಕರಣಗಳಲ್ಲಿ ಆರೋಪಿಗಳ ಪತ್ತೆಗಾಗಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ ಪೆಕರ್ ರವರ ನೇತೃತ್ವದದಲ್ಲಿ ಒಂದು ವಿಶೇಷ ತಂಡವನ್ನು ನೇಮಕ ಮಾಡಲಾಗಿತ್ತು. ಈ ತಂಡವು ಸತತ ಪಯತ್ನ ನಡೆಸಿ ಪದೇ ಪದೇ ಕನ್ನ ಕಳವು ಮಾಡುತ್ತಿದ್ದ ಆಸಾಮಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಈ ಆರೋಪಿಯು ಈ ಹಿಂದೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಸಗಿರಿಯಾಗಿದ್ದು, ಜಾಮೀನು ಮೇಲೆ ಬಿಡುಗಡೆಯಾದ ನಂತರ ತಲೆ ಮರೆಸಿಕೊಂಡು ಕನ್ನ ಕಳವು ಮುಂದುವರಿಸಿದ್ದನು. ಈತನ ಮಾಹಿತಿಯನ್ನು ಸಂಗ್ರಹಿಸಿ ಆತನನ್ನು ದಸಗಿರಿ ಮಾಡಿ ಆತನಿಂದ 319 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿರುತ್ತಾರೆ. ಈತನ ದಸಗಿರಿಯಿಂದ 07 ಕನ್ನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಈತನು ತಮಿಳುನಾಡಿನ ಹಲವಾರು ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕನ್ನಡ ಕಳವು. ಕೇಸಿನಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿರುತ್ತದೆ.
ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪಿಐ ಸುಂದರ್, ಪಿಎಸ್ ಐ, ಪಥ ಕೆ.ಎಲ್. ಮತ್ತು ಅಪರಾದ ಪತ್ತೆ ವಿಭಾಗದ ಸಿಬ್ಬಂದಿಗಳ ತಂಡ ಈ ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version