ವಿದ್ಯಾರ್ಥಿಯನ್ನು ಸುಲಿಗೆ ಮಾಡಿದ್ದ ಆರೋಪಿಗಳ ಬಂಧನ

arest
25/07/2023

ಬೆಂಗಳೂರು;ವಿದ್ಯಾರ್ಥಿಯನ್ನು ಬೆದರಿಸಿ ಕಾರಿನಲ್ಲಿ ಕೂರಿಸಿಕೊಂಡು ಮೊಬೈಲ್‌ನಿಂದ ಹಣವನ್ನು ವರ್ಗಾಯಿಸಿಕೊಂಡು ಸುಲಿಗೆ ಮಾಡಿರುವ ಆರೋಪಿಗಳ‌ ಬಂಧನವಾಗಿದೆ.

ಸದಾಶಿವ ನಗರ ಪೊಲೀಸ್ ಠಾಣೆಯ ಸರಹದ್ದಿನ ರಾಮಯ್ಯ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿ ಜುಲೈ 16ರ ರಾತ್ರಿ ಸುಮಾರು 9.00 ಗಂಟೆಯ ಸಮಯದಲ್ಲಿ ಸೈಬರ್ ಕ್ರೈಂ ಪೊಲೀಸ್‌ ಎಂದು ಕರೆ ಮಾಡಿ,ಕಾರಿನಲ್ಲಿ ಕೂರಿಸಿಕೊಂಡು ನೀವು ಗಾಂಜಾ ಮತ್ತು ಮಾದಕ ವಸ್ತುಗಳನ್ನು ಸೇವಿಸಿದ್ದೀರಿ ಎಂದು ಹೆದರಿಸಿದ್ದಾರೆ.

ಅಲ್ಲದೇ ವಿದ್ಯಾರ್ಥಿ ಬಳಿಯಿದ್ದ ಮೊಬೈಲ್ ಫೋನ್‌ನನ್ನು ಕಿತ್ತುಕೊಂಡು ಅಕ್ಸಿಸ್ ಬ್ಯಾಂಕ್‌ ಅಕೌಂಟ್ ಖಾತೆಯಿಂದ 1,71,000 ರೂಗಳನ್ನು ಅಪರಿಚಿತರು ವರ್ಗಾಯಿಸಿಕೊಂಡಿದ್ದಾರೆ. ಬಳಿಕ‌ ಜುಲೈ 17ರ ರಾತ್ರಿ ಸುಮಾರು 12.30 ಗಂಟೆಗೆ ಕಾರ್ ನಿಂದ ಆ ವಿದ್ಯಾರ್ಥಿಯನ್ನು ಕೆಳಗೆ ಇಳಿಸಿ ಈ ವಿಚಾರವನ್ನು ಯಾರ ಹತ್ತಿರನೂ ಶೇರ್ ಮಾಡಬೇಡ, ಯಾರಿಗಾದರೂ ಹೇಳಿದರೆ ನಿನ್ನನ್ನು ಸಾಯಿಸುತ್ತೇವೆಂದು ಹೆದರಿಸಿದ್ದಾರೆ. ಈ ಬಗ್ಗೆ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪಕರಣ ದಾಖಲಾಗಿತ್ತು.

ಸದರಿ ಪ್ರಕರಣವನ್ನು ಪತ್ತೆಹಚ್ಚಲು ಒಂದು ವಿಶೇಷ ತಂಡವನ್ನು ರಚಿಸಿದ್ದು, ಈ ವಿಶೇಷ ತಂಡವು ಕಾರ್ಯೋನ್ಮುಖರಾಗಿ ಇಬ್ಬರು ಆರೋಪಿಗಳನ್ನು ದಿನಾಂಕ:20.07.2023 ರಂದು ರಾತ್ರಿ 09.30 ಗಂಟೆಗೆ ದಸ್ತಗಿರಿ ಮಾಡಿರುತ್ತಾರೆ. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಮತ್ತೊಬ್ಬ ಆರೋಪಿಯನ್ನು ದಸ್ತಗಿರಿಮಾಡಲಾಗಿರುತ್ತದೆ. ಆರೋಪಿಗಳ ವಶದಿಂದ ಕೃತ್ಯಕ್ಕೆ ಉಪಯೋಗಿಸಿದ 04 ಮೊಬೈಲ್ ಪೋನ್‌ಗಳು, ಮಾರುತಿ ಸುಜುಕಿ ಸಿಯಾಜ್ ಕಾರ್ ಹಾಗೂ 01 ರಾಯಲ್ ಎನ್‌ಪಿಲ್ಡ್, ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯನ್ನು ಕೇಂದ್ರ ವಿಭಾಗ, ಬೆಂಗಳೂರು ನಗರ ಉಪ ಪೊಲೀಸ್ ಆಯುಕ್ತ ಶ್ರೀನಿವಾಸಗೌಡ ಇವರಬ ಮಾರ್ಗದರ್ಶನದಲ್ಲಿ, ಶೇಷಾದ್ರಿಪುರಂ ಉಪ ವಿಭಾಗದ ಎ.ಸಿ.ಪಿ ಚಂದನ್ ಕುಮಾರ್ ಎನ್. ರವರ ನೇತೃತ್ವದಲ್ಲಿ ಸದಾಶಿವನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್, ಕುಮಾರ್.ಎಂ.ಎಸ್ ಹಾಗೂ ಸಿಬ್ಬಂದಿ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ

Exit mobile version