ಒಬ್ಬರ ಗೌರವ ಇನ್ನೊಬ್ಬನ ಆಸ್ತಿ ಆಟದ ಸಾಮಾನ್ ಅಲ್ಲ: ಕಿಚ್ಚನ ಕ್ಲಾಸ್ ಗೆ ಅಶ್ವಿನಿ, ಜಾನ್ವಿ ಸ್ವಿಚ್ ಆಫ್

ಬಿಗ್ ಬಾಸ್ ಸೀಸನ್ 12ರಲ್ಲಿ ಕರಾವಳಿ ಮೂಲದ ಸ್ಪರ್ಧಿ ರಕ್ಷಿತಾ ಅವರನ್ನು ಟಾರ್ಗೆಟ್ ಮಾಡಿ, ಆಕ್ಷೇಪಾರ್ಹ ಪದ ಬಳಕೆ ಮಾಡಿದ ಇತರ ಸ್ಪರ್ಧಿಗಳಾದ ಅಶ್ವಿನಿ ಗೌಡ ಹಾಗೂ ಜಾಹ್ನವಿಗೆ ಕಿಚ್ಚ ಸುದೀಪ್ ಸಕ್ಕತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಿಚ್ಚನ ಪವರ್ ಫುಲ್ ಕ್ಲಾಸ್ ಗೆ ಅಶ್ವಿನಿ, ಜಾನ್ವಿ ಸ್ವಿಚ್ ಆಫ್ ಆಗಿದ್ದಾರೆ.
ನಡೆದಿದ್ದೇನು?
ಅಶ್ವಿನಿ ಗೌಡ ಹಾಗೂ ಜಾಹ್ನವಿ ತಮಾಷೆಗಾಗಿ ರಕ್ಷಿತಾ ರಾರಾ.. ಎಂದು ನಾಗವಲ್ಲಿ ರೀತಿ ಡ್ಯಾನ್ಸ್ ಮಾಡಿದ್ದಳು ಎಂದು ಮನೆಮಂದಿ ಮುಂದೆ ಹೇಳಿದ್ದರು. ಇದಾದ ಬಳಿಕ ಶುಕ್ರವಾರ ಸಂಚಿಕೆಯಲ್ಲಿ ರಕ್ಷಿತಾ ಜೊತೆಗೆ ಅಶ್ವಿನಿ ಗೌಡ ಹಾಗೂ ಜಾಹ್ನವಿ ಗಲಾಟೆ ಮಾಡಿಕೊಂಡಿದ್ದಾರೆ. ಮಾತಿನ ಬರದಲ್ಲಿ ಅಶ್ವಿನಿ, ನಿನ್ನ ಬಟ್ಟೆ ನೋಡಿದರೆ ಗೊತ್ತಾಗುತ್ತೆ ಎಲ್ಲಿಂದ ಬಂದಿದ್ದೀಯಾ ಅಂತ, ಅವಿವೇಕಿ, ಮುಚ್ಚಿಕೊಂಡು ಮಲಗಿಕೋ ಎಂದು ಕೂಗಾಡಿದ್ದರು. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲೂ ಅಶ್ವಿನಿ ಗೌಡ ಹಾಗೂ ಜಾಹ್ನವಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಕಾಮೆಂಟ್ ಮಾಡುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ಇಡೀ ವಾರದ ಬೆಳವಣಿಗೆಯನ್ನು ಗಮನಿಸಿದ ಕಿಚ್ಚ ಸುದೀಪ್ ಅವರು ಅಶ್ವಿನಿ ಗೌಡ ಹಾಗೂ ಜಾಹ್ನವಿ ವಿರುದ್ಧ ಕೆಂಡಾಮಂಡಲ ಆಗಿದ್ದಾರೆ.
ಇದೀಗ ಕಲರ್ಸ್ ಕನ್ನಡ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕಿಚ್ಚ ಸುದೀಪ್ ಅವರು, ‘ನಿಮ್ಮ ಹೇಳಿಕೆಗಳನ್ನು ಹೇಳುತ್ತಾ ಹೋಗುತ್ತೀನಿ. ನಿನ್ನ ನೋಡಿದರೆ ಎಲ್ಲಿಂದ ಬಂದಿರುವೆ ಎಂದು ಗೊತ್ತಾಗುತ್ತೆ, ಕಾರ್ಟೂನ್ ಅಂತೀರಾ. ಸುಧಿ ನಿಮ್ಮನ್ನ ಯಮ್ಮಾ ಅಂತ ಕರೆದರೇ, ಹಾಗೇ ಕರಿಬೇಡ ನನಗೊಂದು ಹೆಸರಿದೆ ಅಂತೀರಿ. ಆದರೆ ನೀವು ಅವಿವೇಕಿ (ಈಡಿಯಟ್) ಎನ್ನುತ್ತೀರಿ. ತಮಾಷೆ ಮಾಡಿಕೊಂಡು ನಿಮ್ಮ ವ್ಯಕ್ತಿತ್ವವನ್ನು ಕೊಲೆ ಮಾಡುತ್ತಾ ಹೋದರೆ ನಿಮಗೆ ಒಪ್ಪಿಗೆ ಇದ್ಯಾ? ಒಬ್ಬನ ಮರ್ಯಾದೆ, ಒಬ್ಬರ ಅಸ್ತಿತ್ವ, ಒಬ್ಬರ ಗೌರವ ಇನ್ನೊಬ್ಬನ ಆಸ್ತಿ ಆಟ ಸಾಮಾನ್ ಆಗಬಾರದು. ಯಾರ ಅಪ್ಪನ ಆಸ್ತಿನೂ ಅಲ್ಲ’ ಎಂದು ವೇದಿಕೆ ಮೇಲೆ ಕಿಚ್ಚ ಸುದೀಪ್ ಗುಡುಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD