ತುರ್ತು ಸಮಯದಲ್ಲಿ ನೆರೆಹೊರೆಯವರಿಂದ ನಿಂಬೆಹಣ್ಣು ಕೇಳುವುದು ಅಸಂಬದ್ಧ: ಬಾಂಬೆ ಹೈಕೋರ್ಟ್

14/03/2024

ನಿಂಬೆಹಣ್ಣು ಕೇಳಲು ನೆರೆಹೊರೆಯವರ ಬಾಗಿಲು ತಟ್ಟಿದ ಆರೋಪದ ಮೇಲೆ ಸಿಐಎಸ್ಎಫ್ ಕಾನ್ಸ್ ಟೇಬಲ್‌ಗೆ ವಿಧಿಸಲಾಗಿದ್ದ ದಂಡವನ್ನು ರದ್ದುಗೊಳಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.

ಮನೆಯಲ್ಲಿ ಮಹಿಳೆಯೊಬ್ಬಳು ತನ್ನ ಆರು ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದಳು. ಆಗ ಹೊಟ್ಟೆ ನೋವು ಎಂದು ಹೇಳಿ ಆಕೆಯ ಮನೆಯ ಬಾಗಿಲನ್ನು ತಟ್ಟಿ ನಿಂಬೆಹಣ್ಣನ್ನು ಕೇಳುವುದು ಅಸಂಬದ್ಧವಾಗಿದೆ ಎಂದು ನ್ಯಾಯಮೂರ್ತಿಗಳಾದ ನಿತಿನ್ ಜಾಮ್ದಾರ್ ಮತ್ತು ಎಂಎಂ ಸತಾಯೆ ಅವರ ವಿಭಾಗೀಯ ಪೀಠ ಹೇಳಿದೆ.

ಮಾರ್ಚ್ 11 ರ ಆದೇಶದಲ್ಲಿ ಈ ನಡವಳಿಕೆಯು ಸಿಐಎಸ್ಎಫ್ ಸಿಬ್ಬಂದಿಗೆ ಯೋಗ್ಯವಲ್ಲ ಎಂದು ಹೇಳಲಾಗಿದೆ. ಹೀಗಾಗಿ ಸಿಐಎಸ್ಎಫ್ ಕಾನ್ಸ್ ಟೇಬಲ್‌ ಅರವಿಂದ್ ಕುಮಾರ್ ಅವರು ಜುಲೈ 2021 ರಿಂದ ಜೂನ್ 2022 ರ ನಡುವೆ ತಮ್ಮ ಮೇಲಧಿಕಾರಿಗಳು ತೆಗೆದುಕೊಂಡ ನಿರ್ಧಾರಗಳನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಏಪ್ರಿಲ್ 19, 2021 ರ ಮಧ್ಯರಾತ್ರಿಯ ಸುಮಾರಿಗೆ ಕಾನ್ಸ್ ಟೇಬಲ್ ನಿಂಬೆಹಣ್ಣಿಗಾಗಿ ತನ್ನ ನೆರೆಹೊರೆಯ ಮನೆಯ ಬಾಗಿಲು ತಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲಿ ಒಬ್ಬಂಟಿಯಾಗಿದ್ದ ಮಹಿಳೆಯು ಮಧ್ಯರಾತ್ರಿ ಅವನನ್ನು ನೋಡಿ ಭಯಭೀತಳಾಗಿದ್ದಳು ಮತ್ತು ಅವನಿಗೆ ಎಚ್ಚರಿಕೆ ನೀಡಿದ್ದಳು. ಹೀಗಾಗಿ ಅವನು ಹೊರಟುಹೋಗಿದ್ದ ಎಂದು ಆರೋಪಿಸಲಾಗಿತ್ತು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version