8:55 AM Wednesday 15 - October 2025

6 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ ಆರೋಪಿಯನ್ನು ಎನ್ ಕೌಂಟರ್ ಮಾಡುತ್ತೇವೆ | ತೆಲಂಗಾಣ ಸಚಿವ ಬಹಿರಂಗ ಹೇಳಿಕೆ

malla reddy
15/09/2021

ಹೈದರಾಬಾದ್: ಆರು ವರ್ಷ ವಯಸ್ಸಿನ ಹೆಣ್ಣು ಮಗುವನ್ನು ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಆರೋಪಿಯನ್ನು ಹಿಡಿದು ಎನ್ ಕೌಂಟರ್ ಮಾಡುತ್ತೇವೆ ಎಂದು  ತೆಲಂಗಾಣ ಸಚಿವ ಮಲ್ಲ ರೆಡ್ಡಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ, ಅವರಿಗೆ ಸಿಗಬೇಕಾದ ಪರಿಹಾರದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದೇನೆ ಎಂದು ಹೇಳಿದರು. ಸಚಿವರು ಸಂತ್ರಸ್ತೆ ಕುಟುಂಬದ ಸದಸ್ಯರಿಗೆ ದೂರವಾಣಿ ಕರೆ ಕೂಡ ಮಾಡಿಲ್ಲ ಎಂಬ ವಿಪಕ್ಷ ನಾಯಕರ ಟೀಕೆಗೆ ಉತ್ತರಿಸಿದ ಅವರು, ಆರೋಪಿಯನ್ನು ಎನ್ ಕೌಂಟರ್ ಮಾಡುವುದಾಗಿ ಹೇಳಿದ್ದಾರೆ.

ಈ ಪ್ರಕರಣವು ಇಡೀ ದೇಶದಲ್ಲಿಯೇ ಸದ್ದು ಮಾಡಿದೆ. ಆರಂಭದಲ್ಲಿ ಆರೋಪಿಯನ್ನು  ಭುವನ್ ಗಿರಿ ಜಿಲ್ಲೆಯ ಯಾದಾದ್ರಿ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಆರೋಪಿಯು ತಲೆ ಮರೆಸಿಕೊಂಡಿದ್ದಾನೆ ಎನ್ನುವುದು ಇದೀಗ ತಿಳಿದು ಬಂದಿದೆ.

ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಲು ಪೊಲೀಸರು 15 ವಿಶೇಷ ಪೊಲೀಸರ ತಂಡವನ್ನು ರಚಿಸಿದ್ದಾರೆ. ಪೊಲೀಸರು ಇದೀಗ ಸಿಸಿ ಟಿವಿ ಫೋಟೇಜ್ ಬಿಡುಗಡೆ ಮಾಡಿದ್ದು, ಇದರಲ್ಲಿ ಆರೋಪಿಯು ತಲೆಗೆ ಟೋಪಿ ಧರಿಸಿ , ಮುಖಕ್ಕೆ ಮಾಸ್ಕ್ ಧರಿಸಿ ಮತ್ತೋರ್ವ ವ್ಯಕ್ತಿಯೊಂದಿಗೆ  ಹೋಗುತ್ತಿರುವುದು ಪತ್ತೆಯಾಗಿದೆ.

ಹೈದರಾಬಾದ್ ನಲ್ಲಿ 6 ವರ್ಷ ವಯಸ್ಸಿನ ಬಾಲಕಿಯನ್ನು ಚಾಕೊಲೇಟ್ ಕೊಡಿಸುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ಬಾಲಕಿ ನಾಪತ್ತೆಯಾಗಿದ್ದಾಳೆ ಎನ್ನುವುದು ಅರಿವಾಗುತ್ತಿದ್ದಂತೆಯೇ ಪೋಷಕರು ಹುಡುಕಾಟ ನಡೆಸಿದ್ದು, ಈ ವೇಳೆ ಆರೋಪಿ ಮನೆಯಲ್ಲಿಯೇ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಆರೋಪಿ ಪರಾರಿಯಾಗಿದ್ದ. ಈ ಘಟನೆ ವ್ಯಾಪಕ ಆಕ್ರೋಶ ಸೃಷ್ಟಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೇ ನಡೆಯುತ್ತಿದೆ.

ಇನ್ನಷ್ಟು ಸುದ್ದಿಗಳು…

ಮಂಗಳೂರು: ನಿಫಾ ವೈರಸ್ ಶಂಕೆ ಇದ್ದ ಯುವಕನ ಪರೀಕ್ಷೆ ವರದಿ ನೆಗೆಟಿವ್ | ಆರೋಗ್ಯಾಧಿಕಾರಿ

ರಾಷ್ಟ್ರಧ್ವಜಕ್ಕೆ ಅಗೌರವ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿರುದ್ಧ ಪ್ರಕರಣ ದಾಖಲು

ಬಸ್ ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು: ಐವರು ಸಜೀವ ದಹನ  

RPI: ಡಾ.ಬಿ.ಆರ್.ಅಂಬೇಡ್ಕರ್ ಅವರ ರಾಜಕೀಯ ಚಿಂತನೆ ಮತ್ತು ಪರ್ಯಾಯ ರಾಜಕಾರಣ | ತುಮಕೂರು ಜಿಲ್ಲಾ ಮಟ್ಟದ ಕಾರ್ಯಕರ್ತರ ಕಾರ್ಯಾಗಾರ

ಆಸ್ತಿಗಾಗಿ ಸಹೋದರರ ಜಗಳ: ಕಟ್ಟಡದ ಮೇಲಿನಿಂದ ಓರ್ವ ಸಹೋದರನನ್ನು ಕೆಳಕ್ಕೆಸೆಯಲು ಯತ್ನ

ಸೋದರಳಿಯನ ಪತ್ನಿಗೆ ಹಲ್ಲೆ, ವಿಷ ಕುಡಿಸಲು ಯತ್ನ: ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ಗಂಭೀರ ಆರೋಪ

ಗ್ಯಾಸ್ ಸಿಲಿಂಡರ್ ತಲೆ ಮೇಲೆ ಹೊತ್ತುಕೊಂಡು ಓಡಾಡುತ್ತಿದ್ದ ಶೋಭಾ ಕರಂದ್ಲಾಜೆ ಇಗೆಲ್ಲಿದ್ದಾರಪ್ಪಾ? | ಸಿದ್ದರಾಮಯ್ಯ ಪ್ರಶ್ನೆ

ಇತ್ತೀಚಿನ ಸುದ್ದಿ

Exit mobile version