1:19 PM Wednesday 15 - October 2025

ಅತ್ತೆ ಮನೆಯಲ್ಲಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪತಿ!

suneetha dinraj
19/08/2021

ಮೂಡುಬಿದಿರೆ:  ಪತಿ ಹಾಗೂ ಪತ್ನಿಯ ನಡುವಿನ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ದರೆಗುಡ್ಡೆ ಗ್ರಾ.ಪಂ. ವ್ಯಾಪ್ತಿಯ ಮಠ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

30 ವರ್ಷ ವಯಸ್ಸಿನ ಸುನೀತಾ ಹತ್ಯೆಗೊಳಗಾದವರಾಗಿದ್ದಾರೆ. ಇವರ ಪತಿ ದಿನ್ ರಾಜ್ ಹತ್ಯೆ ಆರೋಪಿಯಾಗಿದ್ದಾನೆ. ಮಂಗಳವಾರ ಸಂಜೆ ಪತಿ ಹಾಗೂ ಪತ್ನಿಯ ನಡುವೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದ್ದು, ಈ ವೇಳೆ ನಿಯಂತ್ರಣ ಕಳೆದುಕೊಂಡ ಪತಿ ಕೈಗೆ ಸಿಕ್ಕ ಯಾವುದೋ ಆಯುಧದಿಂದ ಪತ್ನಿಯ ತಲೆಗೆ ಹೊಡೆದಿದ್ದಾನೆ ಎನ್ನಲಾಗಿದೆ.

ಪತಿಯ ಏಟಿನಿಂದ ನೆಲಕ್ಕೆ ಕುಸಿತ ಸುನೀತಾ ಅವರ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಸುನೀತಾ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದಿದೆ ಎನ್ನುವುದು ತಿಳಿಯುತ್ತಿದ್ದಂತೆಯೇ ಮನೆ ಮಂದಿ ಹಾಗೂ ಸ್ಥಳೀಯರು ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಆವರು ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು,  ಆರೋಪಿ ದಿನ್ ರಾಜ್ ನನ್ನು ಬಂಧಿಸಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ್ದ ಸುನೀತಾ ಅವರು, ತಮ್ಮ ತಾಯಿ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಒಂದೂವರೆ ವರ್ಷಗಳ ಹಿಂದೆ ಸಂಬಂಧಿಕರು ಸೇರಿ ದಿನ್ ರಾಜ್ ಜೊತೆಗೆ ವಿವಾಹ ಮಾಡಿಸಿದ್ದರು. ಇದೀಗ ಆತನ ಕೈಯಿಂದಲೇ ಸುನೀತಾ ಅವರು ದುರಂತ ಅಂತ್ಯವಾಗಿದ್ದಾರೆ.

ಆರೋಪಿ ದಿನ್ ರಾಜ್ ಕೂಡ ಸುನೀತಾ ಅವರ ಮನೆಯಲ್ಲಿಯೇ ಉಳಿದುಕೊಂಡಿದ್ದ. ಅಲ್ಲಿಂದಲೇ ಮೂಡುಬಿದಿರೆಯ ಬ್ಯಾಟರಿ ಅಂಗಡಿಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಎಂದು ತಿಳಿದು ಬಂದಿದೆ.

ಇನ್ನಷ್ಟು ಸುದ್ದಿಗಳು…

ವಧುವರರಿಗೆ 5 ಲೀಟರ್ ಪೆಟ್ರೋಲ್ ಗಿಫ್ಟ್ ಕೊಟ್ಟು ಹಾಸ್ಯನಟ ನೀಡಿದ ಸಲಹೆ ಏನು ಗೊತ್ತಾ?

ಅಫ್ಘಾನಿಸ್ತಾನದಲ್ಲಿ ಸಿಲುಕಿದ ಕರ್ನಾಟಕ ಮೂಲದ ಇಬ್ಬರು ಕ್ರೈಸ್ತ ಧರ್ಮಗುರುಗಳು!

ರೈತ ಹೋರಾಟಗಾರರ ಬಗ್ಗೆ ಹಗುರವಾಗಿ ನಾಲಿಗೆ ಹರಿಬಿಟ್ಟ ಶೋಭಾ ಕರಂದ್ಲಾಜೆ ಜಿಲ್ಲೆಗೆ ಕಳಂಕ: ಕ್ಯಾಂಪಸ್ ಫ್ರಂಟ್

ತಾಲಿಬಾನಿಗಳಿಗೂ ಬಿಜೆಪಿಗೂ ವ್ಯತ್ಯಾಸವೇನಿಲ್ಲ ಎಂದ ಕಾಂಗ್ರೆಸ್

ಗಾಳಿಯಲ್ಲಿ ಗುಂಡು ಹಾರಿಸಿ ಆತಂಕ ಸೃಷ್ಟಿಸಿದ ಬಿಜೆಪಿ ಕಾರ್ಯಕರ್ತರು!

ತನ್ನ ಬಗ್ಗೆ ತಾನೇ ಪುಸ್ತಕ ಬರೆದುಕೊಂಡು ಸ್ವಾತಂತ್ರ್ಯ ಹೋರಾಟಗಾರನಾದ ಸಾರ್ವರ್ಕರ್ | ಶಾಫಿ ಬೆಳ್ಳಾರೆ

ಇತ್ತೀಚಿನ ಸುದ್ದಿ

Exit mobile version