9:42 PM Saturday 13 - December 2025

ಮನೆಯಲ್ಲಿ ಮಲಗಿದ್ದ ಯುವತಿಗೆ ಕೋಣೆಯ ಕಿಟಕಿ ತೆರೆದು ಲೈಂಗಿಕ ಕಿರುಕುಳಕ್ಕೆ ಯತ್ನ!

manglore
22/09/2023

ಬಂಟ್ವಾಳ: ಮನೆಯಲ್ಲಿ ಮಲಗಿದ್ದ ಯುವತಿಗೆ ಕೋಣೆಯ ಕಿಟಕಿ ತೆರೆದು ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.

ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಯುವತಿ ತನ್ನ ತಂಗಿಯರ ಜೊತೆಗೆ ಮಲಗಿದ್ದಳು.

ಈಕೆಯ ಮನೆಯ ಕೋಣೆಯ ಕಿಟಕಿಯ ಪರದೆಯನ್ನು ಸರಿಸಿ ಬಳಿಕ ಕಿಟಕಿ ಮೂಲಕ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಆರೋಪಿ ವಿಶ್ವನಾಥ ಇಣುಕಿ ನೋಡುತ್ತಿದ್ದ. ಈತ ಕಿಟಕಿಯ ಬಳಿ ನಿಂತು ಇಣುಕಿ ನೋಡುತ್ತಿದ್ದನ್ನು ಗಮನಿಸಿದ ಸಂತ್ರಸ್ತೆ ಜೋರಾಗಿ ಕಿರುಚಿದಾಗ ಅಲ್ಲಿಂದ ಓಡಿ ಹೋಗಿದ್ದಾನೆ. ಈ ಬಗ್ಗೆ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version