1:11 PM Thursday 16 - October 2025

ಟೆಕ್ಕಿಗೆ ಮಾರಣಾಂತಿಕ ಹಲ್ಲೆ: ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಕೊಲೆ ಯತ್ನ ಕೇಸ್!

bengalore
22/04/2025

ಬೆಂಗಳೂರು: ಬೆಂಗಳೂರಿನಲ್ಲಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಮತ್ತು ಟೆಕ್ಕಿ ವಿಕಾಸ್ ಕುಮಾರ್ ನಡುವೆ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಕ್ಕಿ ವಿಕಾಸ್ ಕುಮಾರ್ ನೀಡಿದ ದೂರಿನ ಹಾಗೂ ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ, ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.

ದೂರುದಾರರಾದ ವಿಕಾಸ ಕುಮಾರ್ ದಿನಾಂಕ 21 ರಂದು ಬೆಳಿಗ್ಗೆ, ಸುಮಾರು 6-20 ರ ಸಮಯದಲ್ಲಿ ತನ್ನ ಸ್ನೇಹಿತನ ಬೈಕ್ ವಾಪಸ್ಸು ನೀಡುವ ಸಂಬಂಧ ಅವರ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಮರೂನ್ ಕಲರ್ ಮಾರುತಿ ಸುಜುಕಿ ಎರ್ಟಿಗಾ ಕಾರ್ನಲ್ಲಿ ಬಂದ ವ್ಯಕ್ತಿ ದ್ವಿ ಚಕ್ರ ವಾಹನಕ್ಕೆ ಟಚ್ ಮಾಡಿದ್ದಾರೆ. ನಂತರ ದೂರುದಾರರ ಬೈಕ್ಗೆ ತಮ್ಮ ಕಾರನ್ನು ಅಡ್ಡ ಹಾಕಿ ತಡೆದು ನಿಲ್ಲಿಸಿ ತಮ್ಮ ಕಾರಿಗೆ ಏಕೆ ಟಚ್ ಮಾಡಿರುತ್ತೀಯಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ದೂರುದಾರರು, ಕಾರಿನಲ್ಲಿದ್ದ ವ್ಯಕ್ತಿಗೆ ನೀವೇ ನನ್ನ ಬೈಕ್ಗೆ ಟಚ್ ಮಾಡಿದ್ದೀರಿ ಎಂದು ತಿಳಿಸಿದ್ದಾರೆ. ಅಷ್ಟರಲ್ಲಿ, ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ ಕಾರಿನಿಂದ ಕೆಳಗೆ ಇಳಿದು ಬಂದು ಬೈಕ್ ಅನ್ನು ಮತ್ತು ದೂರುದಾರರನ್ನು ತಳ್ಳಿ, ಕೆಳಗೆ ಬೀಳಿಸಿದ್ದಾರೆ. ಜತೆಗೆ, ನಾನು ಏರ್ಪೋರ್ಸ್ನಲ್ಲಿ ಇರುವವರು. ನನ್ನ ಜೊತೆ ಆಟ ಆಡಬೇಡ ಎಂದು ಧಮಕಿ ಹಾಕಿ ಹೊಡೆದಿದ್ದಾರೆ. ಈ ವೇಳೆ, ದೂರುದಾರರು ಸ್ನೇಹಿತನಿಗೆ ಕರೆ ಮಾಡಲು ಪೋನ್ ತೆಗೆದುಕೊಂಡಾಗ ಕೈಯನ್ನು ಕಚ್ಚಿ ಮೊಬೈಲ್ ಪೋನ್ ಅನ್ನು ಕಿತ್ತುಕೊಂಡು ಬಿಸಾಕಿ ಒಡೆದು ಹಾಕಿದ್ದಲ್ಲದೆ, ಬೈಕ್ ಕೀ ಅನ್ನು ಕಿತ್ತುಕೊಂಡು ಬಿಸಾಡಿದ್ದಾರೆ. ಅಷ್ಟೇ ಅಲ್ಲದೆ, ಸಾಯಿಸುವ ಉದ್ದೇಶದಿಂದ ಹಿಂಬದಿಯಿಂದ ಕುತ್ತಿಗೆಯನ್ನು ಹಿಡಿದುಕೊಂಡು ಕತ್ತನ್ನು ಹಿಸುಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧವೇ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ, ಎಫ್ ಐಆರ್ ನಲ್ಲಿ ಅವರ ಹೆಸರು ಉಲ್ಲೇಖ ಮಾಡಿಲ್ಲ ಎಂದು ವಿಕಾಸ್ ಪರ ವಕೀಲ ಅಜಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಅವರನ್ನು ಬಂಧಿಸಬೇಕು ಅಂತ ಒತ್ತಾಯಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ

Exit mobile version